ದಿನದ ಸುದ್ದಿ

‘ಕೃಷಿ ಪ್ರಶಸ್ತಿ’ಗೆ ರೈತರಿಂದ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ : ಕೃಷಿ ಇಲಾಖೆ ವತಿಯಿಂದ ಕೃಷಿ ಪ್ರಶಸ್ತಿ ಯೋಜನೆಯಡಿ 2019 ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸ್ಪರ್ಧೆಯಲ್ಲಿ ಭಾಗವಹಿಸಲು ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕೃಷಿ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕಿನ 3 ಹಂತಗಳಿಗೆ ಅನ್ವಯಿಸುವಂತೆ ಒಂದೇ ಅರ್ಜಿಯನ್ನು ಸಂಬಂಧಪಟ್ಟ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರುಗಳಿಗೆ ಸಲ್ಲಿಸಬಹುದು.
ಕೃಷಿ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು 3 ಹಂತಗಳಿಗೂ ಒಂದೇ ಪ್ರವೇಶ ಶುಲ್ಕ ಇರುತ್ತದೆ. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡವರಿಗೆ ರೂ.25, ಸಾಮಾನ್ಯ ವರ್ಗದವರಿಗೆ ರೂ.100. ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆ.

ಸ್ಪರ್ಧೆಗೆ ಅರ್ಹವಾದ ಬೆಳೆಗಳು

ಅಂತರ್ ರಾಜ್ಯ ಮಟ್ಟದಲ್ಲಿ ಬೆಳೆ ಸ್ಪರ್ಧೆಯಲ್ಲಿ ಸ್ಫರ್ಧಿಸಬಹುದಾದ ಹತ್ತು ಬೆಳೆಗಳ ವಿವರಗಳು:ಭತ್ತ ಮುಂಗಾರು(ನೀರಾವರಿ), ರಾಗಿ ಮುಂಗಾರು( ಮಳೆಯಾಶ್ರಿತ), ಜೋಳ ಮುಂಗಾರು (ಮಳೆಯಾಶ್ರಿತ), ಜೋಳ ಹಿಂಗಾರು (ಮಳೆಯಾಶ್ರಿತ), ಗೋಧಿ ಹಿಂಗಾರು (ನೀರಾವರಿ), ತೊಗರಿ ಮುಂಗಾರು( ಮಳೆಯಾಶ್ರಿತ), ಕಡಲೆ ಹಿಂಗಾರು (ಮಳೆಯಾಶ್ರಿತ), ಸೋಯವರೆ ಮುಂಗಾರು (ಮಳೆಯಾಶ್ರಿತ), ಸೂರ್ಯಕಾಂತಿ ಮುಂಗಾರು/ ಹಿಂಗಾರು (ಮಳೆಯಾಶ್ರಿತ), ಶೇಂಗಾ ಮುಂಗಾರು( ಮಳೆಯಾಶ್ರಿತ).

ಅಂತರ್ ಜಿಲ್ಲಾ ಮಟ್ಟದಲ್ಲಿ ಕೃಷಿ ಪ್ರಶಸ್ತಿ ಬೆಳೆ ಸ್ಪರ್ಧೆಯ ಬೆಳೆಗಳ ವಿವರಗಳು: ದಾವಣಗೆರೆ ತಾಲ್ಲೂಕಿನಲ್ಲಿ ಭತ್ತ ಮುಂಗಾರು(ನೀರಾವರಿ), ಹರಿಹರ ಭತ್ತ ಮುಂಗಾರು(ನೀರಾವರಿ), ಚನ್ನಗಿರಿ ಭತ್ತ ಮುಂಗಾರು(ನೀರಾವರಿ), ಹೊನ್ನಾಳಿ ಭತ್ತ ಮುಂಗಾರು(ನೀರಾವರಿ), ಜಗಳೂರು ಶೇಂಗಾ ಮುಂಗಾರು( ಮಳೆಯಾಶ್ರಿತ).

ಬಹುಮಾನದ ಮೊತ್ತ: ತಾಲ್ಲೂಕು ಮಟ್ಟದಲ್ಲಿ ಪ್ರಥಮ ಬಹುಮಾನ ರೂ.15,000 ದ್ವೀತಿಯ ಬಹುಮಾನ ರೂ.10,000, ತೃತೀಯ ಬಹುಮಾನ ರೂ.5,000. ಜಿಲ್ಲಾ ಮಟ್ಟದಲ್ಲಿ ಪ್ರಥಮ ಬಹುಮಾನ ರೂ. 30000, ದ್ವೀತಿಯ ಬಹುಮಾನ 25,000, ತೃತೀಯ ಬಹುಮಾನ 20,000, ರಾಜ್ಯ ಮಟ್ಟದಲ್ಲಿ ಪ್ರಥಮ ಬಹುಮಾನ ರೂ. 50000, ದ್ವೀತಿಯ ಬಹುಮಾನ 40000, ತೃತೀಯ ಬಹುಮಾನ 35,000 ರೂಗಳು.
ಪ್ರತಿ ಬೆಳೆಯಲ್ಲೂ ಎಲ್ಲ ಮಟ್ಟದ ಸ್ಪರ್ಧೆಗೂ ಕನಿಷ್ಠ 15 ಅರ್ಜಿಗಳನ್ನು ನೋಂದಾಯಿಸಬಹುದು. ಕನಿಷ್ಟ 12 ತಾಕುಗಳಲ್ಲಿ ಕಡ್ಡಾಯವಾಗಿ ಕಟಾವನ್ನು ನಡೆಸಬೇಕು, ತಪ್ಪಿದಲ್ಲಿ ಸಂಬಂಧಿಸಿದ ಸ್ಪರ್ಧೆಯನ್ನು ಅನರ್ಹಗೊಳಿಸಲಾಗುವುದು.

ಯಾವುದೇ ಹಂತದಲ್ಲಿ ಒಮ್ಮೆ ಬಹುಮಾನ ಪಡೆದ ರೈತರು ಮುಂದಿನ ಮೂರು ವರ್ಷಗಳ ಅವಧಿಗೆ ಆ ಹಂತದ ಬೆಳೆ ಸ್ಪರ್ಧೆಯ ಬಹುಮಾನಕ್ಕೆ ಅರ್ಹನಾಗಿರುವುದಿಲ್ಲ. ಆದರೆ ಆ ಬೆಳೆಯು ಮೇಲಿನ ಹಂತದ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿರುತ್ತದೆ.

ರಾಜ್ಯ ಮತ್ತು ಜಿಲ್ಲಾ ಹಂತದಲ್ಲಿ ರಚಿಸಲಾಗಿರುವ ಸಮಿತಿ/ತಂಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸದಸ್ಯರುಗಳು ಕುಟುಂಬದ ಸದಸ್ಯರು ಸ್ಪರ್ಧೆಗಳಲ್ಲಿ ಭಾಗವಹಿಸುವಂತಿಲ್ಲ. ಅರ್ಜಿ ಸಲ್ಲಿಸುವ ಕೊನೆಯ ದಿನವನ್ನು ಸೆ.30 ರವರೆಗೆ ವಿಸ್ತರಿಸಿದೆ. ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಹಾಗೂ ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version