ದಿನದ ಸುದ್ದಿ
ಮತದಾನ ಮಾಡಿ ಶಾಹಿ ಹಚ್ಚಿದ 100 ಜನರ ಅತ್ಯುತ್ತಮ ಸೆಲ್ಫಿಗೆ ಬಹುಮಾನ
ಸುದ್ದಿದಿನ,ದಾವಣಗೆರೆ : ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮತದಾರರು ಮೇ.7 ರಂದು ಮತದಾನ ಮಾಡಿ, 100 ಮತದಾರರು ಒಟ್ಟಿಗೆ ಶಾಹಿ ಹಚ್ಚಿದ ತೋರು ಬೆರಳನ್ನು ತೋರಿಸಿ ಛಾಯಾ ಚಿತ್ರವನ್ನು ತೆಗೆದು ಜಿಲ್ಲಾ ಪಂಚಾಯತಿಯ ಸ್ವೀಪ್ ವಿಭಾಗದ ಮೊ.ನಂ:9731016999 ಗೆ ಉತ್ತಮ ಸೆಲ್ಪಿ ಛಾಯಾಚಿತ್ರ ಕಳುಹಿಸಿದರೆ ಅವರಿಗೆ ಆಕರ್ಷಕ ಬಹುಮಾನವನ್ನು ನೀಡಲಾಗುವುದು ಎಂದು ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷರಾದ ಸುರೇಶ್.ಬಿ.ಇಟ್ನಾಳ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243