ದಿನದ ಸುದ್ದಿ

ಮೈಬೂಬಸಾಹೇಬ.ವಾಯ‌್.ಜೆ. ಅವರಿಗೆ ‘ಬೆಳ್ಳಿ ಸಂಭ್ರಮ ರಾಜ್ಯ ಪ್ರಶಸ್ತಿ’

Published

on

ಸುದ್ದಿದಿನ ಡೆಸ್ಕ್ : ಬಿ.ಎಲ್.ಡಿ‌.ಇ. ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ‌ ಕಲಾ ವಾಣಿಜ್ಯ & ವಿಜ್ಞಾನ ಮಹಿಳಾ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಮೈಬೂಬಸಾಹೇಬ.ವಾಯ‌್.ಜೆ.ಇವರಿಗೆ ಕರ್ನಾಟಕ ರಾಜ್ಯ ದಲಿತ ಸಾಹಿತ್ಯ ಪರಿಷತ್ತು ಕೊಡುವ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕರ್ನಾಟಕ ರಾಜ್ಯ ದಲಿತ ಸಾಹಿತ್ಯ ಪರಿಷತ್ತು(ರಿ) ರಾಜ್ಯ ಘಟಕ ಗದಗ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಬೆಂಗಳೂರು ಇವರ ಸಹಯೋಗದಲ್ಲಿ ಜುಲೈ 10 ರಂದು ಮುದ್ದೇಬಿಹಾಳ ತಾಲ್ಲೂಕಿನಲ್ಲಿ ನಡೆಯಲಿರುವ ರಾಜ್ಯಮಟ್ಟದ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ರಾಜ್ಯ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾದ್ಯಕ್ಷರಾದ ಡಾ.ಅರ್ಜುನ ಗೊಳಸಂಗಿ ಯವರು ಪತ್ರಿಕಾ ವರದಿಯಲ್ಲಿ ತಿಳಿಸಿದ್ದಾರೆ.

ವಿಜಯಪುರ ಜಿಲ್ಲೆಯಸಿಂದಗಿ ತಾಲ್ಲೂಕಿನ ಯರಗಲ್ ಬಿ.ಕೆ. ಗ್ರಾಮದ ಶ್ರೀ ಏತೀಮಸಾಹೇಬ ಮತ್ತು ಶ್ರೀಮತಿ ಸೈಪನಮಾ ದಂಪತಿಯ ಪುತ್ರರಾದ ಇವರು ‘ತಕರಾರು-ಬಂಡಾಯ ಗೀತೆಗಳು-2019, ಶಾಯರ್-ಇ-ಸುಕೂನ್ – ಗಜಲ್ ಸಂಕಲನ ‘ಚುಮಣಿ- ಕಾದಂಬರಿ•1776- ಐತಿಹಾಸಿಕ ಕಾದಂಬರಿ ಬರೆದದ್ದು ತಮ್ಮ ಅಝಾದ ಪ್ರಕಾಶನದಿಂದಲೂ ಹಲವಾರು ಕೃತಿಗಳನ್ನು ಮುದ್ರಿಸಿದ್ದಾರೆ.

ಇವರ ಸಾಹಿತ್ತಿಕ ಸಾಧನೆಗೆ ಹಲವಾರು ಪುರಸ್ಕಾರಗಳು ಅರಸಿ ಬಂದದ್ದು, ಇವರ ಈ ವರೆಗಿನ ಸಾಹಿತ್ತಿಕ ಸಾಧನೆಯನ್ನು ಗಮನಿಸಿ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version