ದಿನದ ಸುದ್ದಿ
ಎಂ.ಕೆ.ಶೇಖ್ ದೇವರನಿಂಬರಗಿ ಅವರಿಗೆ ಬೆಳ್ಳಿ ಸಂಭ್ರಮ ರಾಜ್ಯ ಪ್ರಶಸ್ತಿ
ಸುದ್ದಿದಿನ ಡೆಸ್ಕ್ : ಸಾಹಿತಿ,ಕಥೆಗಾರ,ವಿಮರ್ಶಕ & ಆಧುನಿಕ ವಚನಗಳ ರುವಾರಿ ಎನಿಸಿಕೊಂಡಿರುವ ಶ್ರೀ.ಎಂ.ಕೆ.ಶೇಖ್- ದೇವರನಿಂಬರಗಿ ಇವರನ್ನು ಕರ್ನಾಟಕ ರಾಜ್ಯ ದಲಿತ ಸಾಹಿತ್ಯ ಪರಿಷತ್ತು ಕೊಡುವ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ರಾಜ್ಯ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾದ್ಯಕ್ಷರಾದ ಡಾ.ಅರ್ಜುನ ಗೊಳಸಂಗಿ ಯವರು ಪತ್ರಿಕಾ ವರದಿಯಲ್ಲಿ ತಿಳಿಸಿದ್ದಾರೆ.
ಶ್ರೀ.ಎಂ.ಕೆ.ಶೇಖ ಅವರ ಬೇಂದ್ರೆ ಮತ್ತು ಇತರೆ ಕಥೆಗಳು-ಎನ್ನುವ ಕಥಾ ಸಂಕಲನ, ಪ್ರತಿಕೃತಿ-ವಿಮರ್ಶಾ ಸಂಕಲನ, ಆಧುನಿಕ ವಚನಗಳು ಎನ್ನುವ ವಚನಗಳ ಸಂಕಲನ, ಜಾತಿಗಳ ಜಾಲದಿಂದ ಕಾದಂಬರಿಗಳು ಈಗಾಗಲೇ ಜನಮನ್ನಣೆ ಪಡೆದದ್ದು. ಸದ್ಯ ಇವರ ‘ನೂಲು’ ಎನ್ನುವ ಕಥಾ ಹಂದರ’ ವನ್ನು ಕಥಾ ಸಂಕಲನವು ದಲಿತ ಸಾಹಿತ್ಯ ಪರಿಷತ್ತಿನ ಬೆಳ್ಳಿ ಹಬ್ಬದ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಆಗಲಿದೆ .ಅವರ ಸಾಹಿತ್ಯಿಕ ಸಾಧನೆ ಗುರುತಿಸಿ ಹಲವಾರು ಪ್ರಶಸ್ತಿ ಪುರಸ್ಕಾರಗಳು ಅರಸಿ ಬಂದಿದ್ದು ಈ ರಾಜ್ಯ ಪ್ರಶಸ್ತಿಯೂ ಅವರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243