ದಿನದ ಸುದ್ದಿ

ಭಾರತ ಹಿಂದೂ ಧರ್ಮದ ಗುಲಾಮಗಿರಿಯಲ್ಲಿದೆ : ಪ್ರೊ.ಕೆ.ಎಸ್.ಭಗವಾನ್

Published

on

ಸುದ್ದಿದಿನ,ಮೈಸೂರು : ಭಾರತ ಈ ಹಿಂದೆಯೂ ಗುಲಾಮಗಿರಿಯಲ್ಲಿ ಇತ್ತು, ಈಗಲೂ ಭಾರತ ಒಂದು ರೀತಿ ಗುಲಾಮಗಿರಿಯಲ್ಲಿ ಇದೆ. ಭಾರತ ಇಂದು ಹಿಂದೂ ಧರ್ಮದ ಗುಲಾಮಗಿರಿ ಯಲ್ಲಿದೆ ಎಂದು ಸಾಹಿತಿ ಪ್ರೊ. ಭಗವಾನ್ ಮೈಸೂರಿನ ಅಂಬೇಡ್ಕರ್ ಪಾರ್ಕ್ ನಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಹೇಳಿದರು.

ಬ್ರಾಹ್ಮಣರನ್ನು ಹೊರತುಪಡಿಸಿದರೆ ಉಳಿದ ಲಿಂಗಾಯತಿರು, ಒಕ್ಕಲಿಗರು ಸೇರಿದಂತೆ ಎಲ್ಲರೂ ಶೂದ್ರರು.‌ಮನುಸ್ಮೃತಿ ಯಲ್ಲಿ ಶೂದ್ರರು ಅಂದ್ರೆ ದಾಸಿಯ ಮಕ್ಕಳು, ಸೂಳೆ ಮಕ್ಕಳು ಅಂತ ಬರೆದಿದ್ದಾನೆ. ಜನರಿಗೆ ಗುಲಾಮಗಿರಿಯನ್ನು ವಿರೋಧ ಮಾಡುವ ತಾಕತ್ ಇಲ್ಲ ಎಂದರು.

ನಾವು ವಿರೋಧ ವ್ಯಕ್ತಪಡಿಸಿದ್ದಕ್ಕೆ ಕೆಲ ಗುಲಾಮರು ನನ್ನನ್ನು ವಿರೋಧಿಸುತ್ತಿದ್ದಾರೆ. ಒಂದು ವರ್ಗದ ಗುಲಾಮರು ಮತ್ತು ಅವರ ಗುಲಾಮರು ನನ್ನ ವಿರೋಧಿಸುತ್ತಾರೆ.ಇದೇ ಗುಲಾಮರು ಹೋಗಿ ಬಾಬರಿ ಮಸೀದಿ ಹೊಡೆದು ಹಾಕಿದರು.ಕೆಲ ಗುಲಾಮರು ಹಣ ಕೊಟ್ಟು ಮನೆಯಲ್ಲಿದ್ದೆ ತಮ್ಮ ನೀಚ ಕಾರ್ಯವನ್ನು ಸಾಧಿಸಿ ಬಿಡ್ತಾರೆ ಎಂದು ಕಿಡಿಕಾರಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version