ದಿನದ ಸುದ್ದಿ
ರಾಜ್ಯಾದ್ಯಂತ ವಿದ್ಯುತ್ ವಾಹನ ಬಳಕೆಗೆ ಉತ್ತೇಜನ; ಬೆಂಗಳೂರಿನಲ್ಲಿ 152 ಚಾರ್ಜಿಂಗ್ ಸೆಂಟರ್ ಉದ್ಘಾಟನೆ : ಸಿಎಂ ಬಸವರಾಜ ಬೊಮ್ಮಾಯಿ
ಸುದ್ದಿದಿನ ಡೆಸ್ಕ್ : ಬೆಸ್ಕಾಂ ವತಿಯಿಂದ ಬೆಂಗಳೂರಿನಲ್ಲಿಂದು ಆಯೋಜಿಸಲಾಗಿದ್ದ ಎಲೆಕ್ಟ್ರಿಕ್ ವೆಹಿಕಲ್ ಅಭಿಯಾನ-2022ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ಬೆಂಗಳೂರಿನ 152 ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಜೈವಿಕ ಇಂಧನ ಬಳಕೆಯನ್ನು ಕಡಿಮೆ ಮಾಡಬೇಕು ಎಂದರು.
ಕಳೆದ ಮೂರು ದಶಕಗಳ ಹಿಂದೆ ಸಂಶೋಧನೆ ಪ್ರಾರಂಭವಾಗಿ ಇಂದು ಹಲವಾರು ಆಯಾಮಗಳಲ್ಲಿ ಯಶಸ್ಸು ಕಂಡಿದೆ. ಸಾರಿಗೆ ವ್ಯವಸ್ಥೆಯಲ್ಲಿ ಸ್ಕೂಟರ್‌ನಿಂದ ಹಿಡಿದು, ಭಾರೀ ವಾಹನಗಳು ಹೊರಸೂಸುವ ಇಂಗಾಲದಿಂದ ಪರಿಸರದ ಮೇಲೆ ಪ್ರತಿಕೂಲ ವಾತಾವರಣ ಉಂಟಾಗಲಿದೆ. ಇದನ್ನು ತಡೆಯಲು ಎಲೆಕ್ಟ್ರಿಕ್ ವಾಹನ ಪ್ರಮುಖ ಪಾತ್ರ ವಹಿಸಲಿವೆ ಎಂದರು.
ನವೀಕರಿಸಬಹುದಾದ ಇಂಧನದ ಸಂಗ್ರಹದ ಬಗ್ಗೆಯೂ ಇನ್ನಷ್ಟು ಸಂಶೋಧನೆ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದ ಅವರು, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮುಂದಿನ ದಿನಗಳಲ್ಲಿ ಅತಿ ಹೆಚ್ಚು ವಿದ್ಯುನ್ಮಾನ ಬಸ್‌ಗಳನ್ನು ಜೋಡಣೆ ಮಾಡಲಿದೆ ಎಂದರು.
ಪರಿಸರದ ಮೇಲೆ ಆಗುವ ಹಾನಿಯನ್ನು ತಡೆಗಟ್ಟಲು ಹಾಗೂ ನವೀಕರಿಸಬಹುದಾದ ಇಂಧನಕ್ಕೆ ಪರ್ಯಾಯ ವ್ಯವಸ್ಥೆ, ವಿದ್ಯುನ್ಮಾನ ವಾಹನ ಎಂದು ಉಲ್ಲೇಖಿಸಲಾಗಿದೆ. ಆ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸೌರಶಕ್ತಿಯಿಂದ ಬಳಸುವ ವಾಹನಗಳ ಉತ್ಪಾದನೆಯಾಗಬೇಕಾಗಿದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಪ್ರತಿಪಾದಿಸಿದರು.
ಕೇಂದ್ರ ಸಚಿವ ಭಗವಂತ ಖೂಬಾ, ಸಚಿವರಾದ ಉಮೇಶ್ ಕತ್ತಿ, ವಿ. ಸುನಿಲ್ ಕುಮಾರ್, ಶಾಸಕ ನಾಗರಾಜ ಯಾದವ್, ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಪಿ. ರವಿಕುಮಾರ್, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್ ಮುಂತಾದವರು ಉಪಸ್ಥಿತರಿದ್ದರು.
ಇಂದು ಮಾನ್ಯ ಮುಖ್ಯಮಂತ್ರಿ ಶ್ರೀ @BSBommai ಅವರು ಇಂಧನ ಇಲಾಖೆ ಹಾಗೂ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ವತಿಯಿಂದ ಜಯಮಹಲ್ ರಸ್ತೆಯ ಚಾಮರ ವಜ್ರದಲ್ಲಿ ಆಯೋಜಿಸಿರುವ “ ಇ.ವಿ. ಅಭಿಯಾನ -2022 ” ಹಾಗೂ “ ಇವಿ ಏಕ್ಸ್-ಪೋ” ಗೆ ಚಾಲನೆ ನೀಡಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. pic.twitter.com/aHkprLmBtf
— CM of Karnataka (@CMofKarnataka) July 1, 2022
ಸುದ್ದಿದಿನ.ಕಾಂ|ವಾಟ್ಸಾಪ್|9980346243