ದಿನದ ಸುದ್ದಿ
ಮುಸ್ಲಿಮರ ಪ್ರವೇಶ ಮತ್ತು ಪೂಜೆಯ ಹಕ್ಕಿಗೆ ಅಡ್ಡಿಯಾಗದಂತೆ ಶಿವಲಿಂಗ ಪತ್ತೆಯಾದ ಪ್ರದೇಶ ರಕ್ಷಿಸಿ : ಸುಪ್ರೀಂ ಕೋರ್ಟ್
ಸುದ್ದಿದಿನ, ವಾರಣಾಸಿ : ಮುಸ್ಲಿಮರ ಪ್ರವೇಶ ಮತ್ತು ಪೂಜೆಯ ಹಕ್ಕಿಗೆ ಅಡ್ಡಿಯಾಗದಂತೆ ಶಿವಲಿಂಗ ಪತ್ತೆಯಾದ ಪ್ರದೇಶವನ್ನು ರಕ್ಷಿಸುವಂತೆ ಸುಪ್ರೀಂ ಕೋರ್ಟ್ ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಗೆ ಸೂಚಿಸಿದೆ.
ಅಲ್ಲದೆ, ಈ ವಿಷಯವನ್ನು ನಾಳೆ ಮತ್ತೆ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ. ಈ ಮಧ್ಯೆ, ಜ್ಞಾನವಾಪಿ ಮಸೀದಿಯ ಒಳಭಾಗದ ವಿಡಿಯೊ ಸಮೀಕ್ಷೆಗಾಗಿ ನೇಮಿಸಲಾಗಿದ್ದ ಕಮಿಷನರ್ ಅಜಯ್ ಕುಮಾರ್ ಮಿಶ್ರಾರನ್ನು ವಾರಾಣಸಿ ನ್ಯಾಯಾಲಯ ವಜಾಗೊಳಿಸಿದೆ.
ಸಮೀಕ್ಷೆಯ ವಿವರಗಳನ್ನು ಸೋರಿಕೆ ಮಾಡಿದ ಆರೋಪದ ಮೇಲೆ, ಅವರ ವಿರುದ್ಧ ನ್ಯಾಯಾಲಯವು ಈ ಕ್ರಮ ತೆಗದುಕೊಂಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243