ದಿನದ ಸುದ್ದಿ
ಟ್ರಾಫಿಕ್ ಜಾಮ್ ನಿಂದ ಬೇಸತ್ತ ಜೆ.ಪಿ.ನಗರವಾಸಿಗಳಿಂದ ಪ್ರತಿಭಟನೆ
ಸುದ್ದಿದಿನ,ಬೆಂಗಳೂರು : ಸದಾ ಜನಬಿಡಿತವಾಗಿರುವ ಜೆ.ಪೆ.ನಗರ , ಇತ್ತೀಚಿನ ದಿನಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಎದಿರಿಸುತ್ತಿದೆ. 29 ಜೂನ್, ಶನಿವಾರದಂದು ಗಂಟೆ ಗಟ್ಟಲೆ ಟ್ರಾಫಿಕ್ ಜಾಮ್ ನಿಂದ ಬೇಸತ್ತ ಜೆ.ಪಿ.ನಗರ ನಿವಾಸಿಗಳು ರಸ್ತೆ ಗಿಳಿದು ಶಾಂತಿಯುತ ಪ್ರತಿಭಟನೆ ಮಾಡಿದರು.
ಜೆ.ಪಿ.ನಗರದ 24ನೇ ಮೇನ್ ರೋಡ್ ಅಪಾರ್ಟ್ಮೆಂಟ್ ನಿವಾಸಿಗಳ ಸಂಫವು ಈ ಪ್ರತಿಭಟನೆ ಕರೆದಿದ್ದು, ಮಹಾವೀರ್ ರಿವಿಯೆರಾ, ಎಲಿಟಾ , ಬ್ರಿಗೇಡ್ ಪಾಮ್ ಸ್ಪ್ರಿಂಗ್ಸ್, ಸೇರಿದಂತೆ ಸುಮಾರು 22 ಅಪಾರ್ಟ್ಮೆಂಟ್ ಗಳು ಈ ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು. ಚಿನ್ನರು, ವೃದ್ದರು, ಮಹಿಳೆಯರು , ಸೇರಿದಂತೆ ಸಾವಿರಕ್ಕೂ ಹೆಚ್ಚು ಜೆ.ಪಿ ನಗರ ನಿವಾಸಿಗಳು, ಟ್ರಾಫಿಕ್ ಜಾಮ್ ನಿಂದ ತಮಗೆ ಆಗುತ್ತಿರುವ ತೊಂದರಗಳನ್ನು ರಸ್ತೆ ಗಿಳಿದು ಪೋಷಣೆ ಕೂಗುವುದುರೊಂದಿಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಎಂ.ಎಲ್.ಆರ್ ಕಾನ್ವೆಂಷನ್ ಹಾಲ್ ನಿಂದ ಶುರುವಾದ ಮೆರವಣಿಗೆ ನಂದಿನಿ ಹೋಟೆಲ್ ವೃತ್ತದಲ್ಲಿ ಅಂತ್ಯ ವಾಯಿತು.ದಿನನಿತ್ಯ ನಡೆಯುವ ಆಕ್ಸಿಡೆಂಟ್, ರೋಡ್ ಬ್ಲಾಕ್, ರಸ್ತೆ ಕಾಮಗಾರಿ, ರಸ್ತೆ ಬದಿಯಲ್ಲಿನ ಅನಧಿಕೃತ ಪಾರ್ಕಿಂಗ್, ಶಾಲಾ ಕಟ್ಟಡದ ಹತ್ತಿರದಲ್ಲೇ ಇತ್ತೀಚೆಗೆ ಶುರುವಾಗಿರುವ ಮೈಕ್ರೋ ಬ್ರೂವೆರಿ, ಹುಕ್ಕಾ ಬಾರ್ ಗಳಿಂದಾಗಿ ಹೆಚ್ಚುತ್ತಿರುವ ಟ್ರಾಫಿಕ್ ಜಾಮ್ ಬಗ್ಗೆ , ಹಾಗೂ ಬಿಬಿಎಂಪಿ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಹೆಚ್ಚು ಟ್ರಾಫಿಕ್ ಸಂಚಾರವಿರುವ ಜೆ.ಪಿ ನಗರದಲ್ಲಿ ಸರಿಯಾದ ಸಂಚಾರಿ ಪೊಲೀಸ್ ವ್ಯವಸ್ಥೆ ಇಲ್ಲದಿರುವುದೇ ಎಲ್ಲಾ ಅವಘಡಗಳಿಗೆ ಕಾರಣವೆನ್ನಲಾಗಿದೆ.
ಇನ್ನು ಮುಂದೆಯಾದರೂ ಬಿಬಿಎಂಪಿ ಹಾಗೂ ಸಂಚಾರಿ ಪೊಲೀಸರು ಎಚ್ಚೆತ್ತು ಕೊಂಡು ಜೆ.ಪಿ ನಗರ ನಿವಾಸಿಗಳ ಟ್ರಾಫಿಕ್ ಸಂಕಷ್ಟ ನಿವಾರಿಸುತ್ತಾರ? ಕೋದು ನೋಡಬೇಕಿದೆ.
ವರದಿ : ಚಿತ್ರಶ್ರೀ ಹರ್ಷ
ಸುದ್ದಿದಿನ.ಕಾಂ|ವಾಟ್ಸಾಪ್|9980346243