ದಿನದ ಸುದ್ದಿ
ದಲಿತ ಮಹಿಳೆ ಬೆತ್ತಲೆಗೊಳಿಸಿ ಹಲ್ಲೆ : ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ
ಸುದ್ದಿದಿನ, ಮದ್ದೂರು : ಗುಜರಾತ್ ನಲ್ಲಿ ದಲಿತ ಮಹಿಳೆಯನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಕಿಡಿಗೇಡಿಗಳನ್ನು ಬಂಧಿಸಿ ಗಲ್ಲು ಶಿಕ್ಷೆಗೆ ಒಳಪಡಿಸಬೇಕು ಎಂದು ಪ್ರತಿಭಟನೆ ನಡೆಸಿದರು.
ರಾಷ್ಟ್ರಾದ್ಯಂತ ಸಂವಿಧಾನಕ್ಕೆ ಅಪಮಾನವಾಗುತ್ತಿದ್ದು ದಲಿತರ ಮೇಲೆ ಪ್ರತಿದಿನ ದೌರ್ಜನ್ಯ ಕೊಲೆ ಪ್ರಕರಣಗಳು ನಡೆಯುತ್ತಿದ್ದರೂ ಕಂಡು ಕಾಣದಂತೆ ಕುಳಿತಿರುವ ಪ್ರಧಾನಿ ಮೋದಿಯವರು ಕೂಡಲೇ ರಾಜೀನಾಮೆ ನೀಡುವಂತೆ ಒತ್ತಾಯಿಸಿದರು.
ಪ್ರತಿಭಟನೆ ನೇತೃತ್ವವನ್ನು ದಲಿತ ಮುಖಂಡರುಗಳಾದ ಕಬ್ಬಾಳಯ್ಯ , ಮೂರ್ತಿ, ಮುತ್ತಣ್ಣ, ಬೋರಯ್ಯ, ಅಂಬರೀಷ್, ಶಂಕರ್, ಯೋಗೇಶ್, ಸ್ವಾಮಿ, ಹಾಗೂ ಇತರೆ ಮುಖಂಡರುಗಳು ಭಾಗವಹಿಸಿದ್ದರು.