ದಿನದ ಸುದ್ದಿ
ಹೈಕೋರ್ಟ್ ಆದೇಶದಂತೆ ಕನಿಷ್ಠ ಕೂಲಿ ಜಾರಿಗೊಳಿಸಲಿ : ಜಿ. ರಾಮಕೃಷ್ಣ
ಸುದ್ದಿದಿನ, ಮಂಡ್ಯ : ಹೈಕೋರ್ಟ್ ಆದೇಶದಂತೆ ಕನಿಷ್ಠ ಕೂಲಿಯನ್ನು ಜಾರಿಗೊಳಿಸಬೇಕು,ಸ್ಕೀಮ್ ನೌಕರರಾದ ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರನ್ನೂ ಕನಿಷ್ಠ ಕೂಲಿ ವ್ಯಾಪ್ತಿಗೊಳಪಡಿಸಬೇಕು,ಎಂದು ಮಂಗಳವಾರ ಬೆಳಿಗ್ಗೆ 10ಕ್ಕೆಮಂಡ್ಯದ ಸಿಲ್ವರ್ ಜೂಬ್ಬಿಲಿ ಪಾರ್ಕ್ ನಿಂದ CITU ನೇತ್ರತ್ವದಲ್ಲಿ ಮಂಡ್ಯದ ಕಾರ್ಮಿಕ ಅಧಿಕಾರಿಗಳು ಕಚೇರಿಯೆದುರು ಪ್ರತಿಭಟನೆ ನಡೆಯಿತು.
ತಂದೆ ತಾಯಿಗಳನ್ನೊಳಗೊಂಡು 5 ಘಟಕಗಳ ಆಧಾರದಲ್ಲಿ ಕನಿಷ್ಠ ಕೂಲಿ ರೂ.18,000/- ನಿಗದಿಗೊಳಿಸಬೇಕು, ಬೆಲೆಯೇರಿಕೆ ಸೂಚ್ಯಾಂಕ ನಿಗದಿಯಲ್ಲಿನ ಮೋಸ ನಿಲ್ಲಿಸಬೇಕು,ಅಸಂಘಟಿತ ಕಾರ್ಮಿಕರಾದ ಮನೆಕೆಲಸಗಾರರು,ಟೈಲರ್, ಮೆಕ್ಯಾನಿಕ್,ಹಮಾಲಿಗಳಿಗೆ ಸ್ಮಾರ್ಟ್ ಕಾರ್ಡ್ ನೀಡಬೇಕು,10 ರೂ.ಇದ್ದ ಕಾರ್ಮಿಕ ಸಂಘದ ನೊಂದಣಿ ಶುಲ್ಕವನ್ನು ರೂ.1000/-ಕ್ಕೆ ಹೆಚ್ಚಳ ಮಾಡಿರುವುದನ್ನು ಹಿಂಪಡೆಯಬೇಕು,ಕಾರ್ಮಿಕ ಇಲಾಖೆಯಲ್ಲಿನ ಖಾಲಿ ಇರುವ ಹುದ್ದೆಗಳಿಗೆ ಕೂಡಲೇ ನೇಮಕಾತಿಗೊಳಿಸಬೇಕು ಹಾಗೂ ಬೀಡಿ ಕಾರ್ಮಿಕರಿಗೆ ಬಾಕಿಯಿರಿಸಿದ ಕನಿಷ್ಟ ಕೂಲಿ-ತುಟ್ಟಿಭತ್ತೆಯನ್ನು ನೀಡಬೇಕೆಂದು ಎಂದು CITU ಮಂಡ್ಯ ಜಿಲ್ಲಾ ಅಧ್ಯಕ್ಷರಾದ G.ರಾಮಕೃಷ್ಣ ಒತ್ತಾಯಿಸಿದರು.
2016-17ನೇ ಸಾಲಿನಿಂದ ಕರ್ನಾಟಕ ರಾಜ್ಯ ಸರಕಾರ ಕನಿಷ್ಠ ವೇತನ ಪರಿಷ್ಕರಿಸಲು ಮಾಲೀಕರು,ಕಾರ್ಮಿಕರು, ಸರಕಾರದ ಸಮಸಂಖ್ಯೆಯ ಪ್ರತಿನಿಧಿಗಳನ್ನೊಳಗೊಂಡ ಕನಿಷ್ಠ ಕೂಲಿ ಸಲಹಾ ಮಂಡಳಿಯಲ್ಲಿ ಚರ್ಚಿಸಿದ ನಂತರ ಸರಕಾರಕ್ಕೆ ಶಿಫಾರಸು ಮಾಡಿತ್ತು.ಈ ಶಿಫಾರಸ್ಸಿನ ಆಧಾರದಲ್ಲಿ ಸರಕಾರ ಕರಡು ಅಧಿಸೂಚನೆಯನ್ನು ಹೊರಡಿಸಿ,ಆಕ್ಷೇಪಗಳನ್ನು ಸ್ವೀಕರಿಸಿ ನಂತರ ಅಂತಿಮ ಅಧಿಸೂಚನೆಗಳನ್ನು ಹೊರಡಿಸಿತ್ತು.ಇದರ ವಿರುದ್ದ ಮಾಲೀಕರು ಹಾಗೂ ಮಾಲೀಕರ ಸಂಘಗಳು ರಾಜ್ಯ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು ಎಂದರು.
2-3 ವರ್ಷಗಳ ಕಾಲ ಹೈಕೋರ್ಟ್ ನಲ್ಲಿ ವಾದ ವಿವಾದಗಳನ್ನು ಆಲಿಸಿದ ನಂತರ ಗೌರವಾನ್ವಿತ ನ್ಯಾಯಮೂರ್ತಿ ಗಳಾದ ಕ್ರಷ್ಣ ದೀಕ್ಷಿತ್ ರವರ ಪೀಠವು 37 ವಿವಿಧ ಶೆಡ್ಯೂಲ್ ಕೈಗಾರಿಕೆಗಳಿಗೆ ರಾಜ್ಯ ಸರಕಾರ ನಿಗದಿಗೊಳಿಸಿರುವ ಕನಿಷ್ಠ ವೇತನ ಅಧಿಸೂಚನೆಯನ್ನು ಎತ್ತಿ ಹಿಡಿದಿರುವುದಲ್ಲದೆ, ಅಧಿಸೂಚನೆಯ ದಿನಾಂಕದಿಂದಲೇ 6% ಬಡ್ಡಿಯೊಂದಿಗೆ ಬಾಕಿಯನ್ನು 8 ವಾರಗಳೊಳಗೆ ಸಂದಾಯ ಮಾಡುವಂತೆಯೂ ಆದೇಶಿಸಿದೆ.ಒಟ್ಟಿನಲ್ಲಿ ಹೈಕೋರ್ಟ್ ನ ಈ ತೀರ್ಪಿನಿಂದಾಗಿ ಅಂಗಡಿ,ವಾಣಿಜ್ಯ ಸಂಸ್ಥೆಗಳು,ಅಟೋಮೊಬೈಲ್,ಆಸ್ಪತ್ರೆ,ನರ್ಸಿಂಗ್ ಹೋಂಗಳು, ಟೈಲರಿಂಗ್, ಹಾಸ್ಟೆಲ್, ಸೆಕ್ಯೂರಿಟಿ, ಹೋಟೇಲ್, ಬೇಕರಿಗಳು, ಇಟ್ಟಿಗೆ,ಮರದ ಕೆಲಸ,ಗ್ಲಾಸ್ ಮುಂತಾದ 37 ವಿವಿಧ ಕೈಗಾರಿಕೆಗಳ ಖಾಯಂ-ಗುತ್ತಿಗೆ-ತಾತ್ಕಾಲಿಕ-ಬದಲಿ-ಹೊರಗುತ್ತಿಗೆ ಕಾರ್ಮಿಕರೆಲ್ಲರೂ ತಮ್ಮ ಮೂಲವೇತನವನ್ನು ಹೆಚ್ಚಿಸಿಕೊಳ್ಳಲು ಅರ್ಹರಾಗಿದ್ದಾರೆ ಎಂದು ಹೇಳಿದರು.
ಈ ಪ್ರತಿಭಟನೆಯಲ್ಲಿ CITU ಮುಖಂಡರಾದ ಕುಮಾರಿ.M.M.ಶಿವಕುಮಾರ್ ಕಟ್ಟಡ ಕಾರ್ಮಿಕ ಸಂಘದ .ಪ್ರಧಾನಕಾರ್ಯದರ್ಶಿH.K.ತಿಮ್ಮೇಗೌಡ. ಅಂಗನವಾಡಿ ನೌಕರರ ಸಂಘದ ಮುಖಂಡರಾದ ಜಯಲಕ್ಷ್ಮಿಮ್ಮ.ಬಿಸಿ ಊಟ ನೌಕರರ ಸಂಘದ ಪುಟ್ಟಮ್ಮ.ವೆಂಕಟಲಕ್ಷಮ್ಮ.PCL ರಾಜು ಬಿದಿಬದಿ ವ್ಯಾಪಾರಿಗಳ ಸಂಘದ ಚಂದ್ರಶೇಖರ ರವರು ಭಾಗವಹಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243