ದಿನದ ಸುದ್ದಿ
ಶಿವಮೊಗ್ಗ : ಅಲೆಮಾರಿ ಸಮುದಾಯದಿಂದ ವಸತಿ, ನಿವೇಶನ, ಜಾತಿ ದೃಢೀಕರಣ ಪತ್ರಕ್ಕೆ ಆಗ್ರಹಿಸಿ ಪ್ರತಿಭಟನೆ
ಸುದ್ದಿದಿನ,ಶಿವಮೊಗ್ಗ : ನಗರದ ಸಹ್ಯಾದ್ರಿ ಕಾಲೇಜು ಬಳಿ ಬೈಪಾಸ್ ರಸ್ತೆ ಪಕ್ಕದಲ್ಲಿರುವ ಅಲೆಮಾರಿ ಸಮುದಾಯದವರಿಂದ ನಿವೇಶನಕ್ಕೆ, ವಸತಿ ವ್ಯವಸ್ಥೆಗೆ,ಜಾತಿ ದೃಢೀಕರಣ ಪತ್ರಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಮನವಿಪತ್ರ ಸ್ವೀಕರಿಸಿ ಮಾತಾಡಿದ ಜಿಲ್ಲಾಧಿಕಾರಿ ಕೆ ಎ ದಯಾನಂದ ಈಗಾಗಲೇ ತೀರ್ಥಹಳ್ಳಿಯಲ್ಲಿ ಅಲ್ಲಿನ ಅಲೆಮಾರಿ ಸಮುದಾಯದವರಿಗೆ ಜಾಗ ಗುರುತಿಸಿ ಸರ್ಕಾರಕ್ಕೆ ಕಳಿಸಲಾಗಿದೆ, ಶಿವಮೊಗ್ಗದಲ್ಲಿಯೂ ಜಾಗ ಗುರುತಿಸುವ ಕೆಲಸ ನಡೆದಿದೆ.ಜಾತಿ ದೃಢೀಕರಣ ಪತ್ರ ನೀಡುವ ಸಂಬಂಧ ಕ್ರಮ ಕೈಗೊಳ್ಳ ಲಾಗಿದೆ ಎಂದರು.
ಅಲೆಮಾರಿ ಸಮುದಾಯದ ನೂರಾರು ಮಹಿಳೆಯರು ಮಕ್ಕಳು ಪ್ರತಿಭಟನೆಯಲ್ಲಿ ಇದ್ದರು.ಘೋಷಣೆ ಕೂಗಿ ಬೇಡಿಕೆಗೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಅಲೆಮಾರಿ ಸಮುದಾಯದ ಮುಖಂಡರಾದ ಗಂಗಣ್ಣಿ, ಲಕ್ಹ್ಮಣ,ಸುಂಕ,ನಿರಂತರ ಸಂಘಟನೆಯ ಟಿ ಅನಿಲ್ ಕುಮಾರ್,ಜಾರ್ಜ್ ಸಲ್ಡಾನ , ಸ್ಪಂದನ ಸಂಘಟನೆಯ ಎಂ ವಿ ಪ್ರತಿಭಾ,ಪತ್ರಕರ್ತರಾದ ಶೃಂಗೇಶ್,ಸುನಿಲ್ ಶಿರನಲ್ಲಿ,ಮಹಿಳಾ ಒಕ್ಕೂಟದ ರೇಖಾಂಬ ಮೊದಲಾದವರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243