ದಿನದ ಸುದ್ದಿ
ದಲಿತ ಮಹಿಳೆ ಜೀತಕ್ಕೆ ಎಳೆದೊಯ್ದ ಪ್ರಕರಣ | ದಲಿತ ಸಂಘಟನೆಗಳ ಪ್ರತಿಭಟನೆ
ಸುದ್ದಿದಿನ ಡೆಸ್ಕ್ : ಮದ್ದೂರು ತಾಲ್ಲೂಕು ಬೆಕ್ಕಳಲೆ ಗ್ರಾಮದಲ್ಲಿ ದಲಿತ ಮಹಿಳೆಯನ್ನು ಜೀತ ಕೆಲಸಕ್ಕೆ ಹಲ್ಲೆ ಮಾಡಿ ಅಪಹರಣ ಮಾಡಿದ ಮಾಜಿಎ.ಪಿ.ಎಂ.ಸಿ.ಅಧ್ಯಕ್ಷ ನಾಗೇಶ್ ಮತ್ತು ಆತನ ಸಹಚರರನ್ನು ಬಂಧಿಸಿ ಉಗ್ರ ಶಿಕ್ಷೆಯನ್ನು ವಿಧಿಸಬೇಕೆಂದು ದಲಿತ ಪರ ಸಂಘಟನೆಗಳು ಇಂದು ಭಾರತಿ ನಗರದಲ್ಲಿ ( ಕೆ.ಎಂ.ದೊಡ್ಡಿ) ತಮಟೆ ಚಳುವಳಿ ಮತ್ತು ರಸ್ತೆ ತಡೆ ನಡೆಸಿದರು.
ನೊಂದ ಮಹಿಳೆಗೆ ಸರ್ಕಾರ ಪರಿಹಾರ ನೀಡಿ, ಸರ್ಕಾರಿ ಕಚೇರಿಯಲ್ಲಿ ಕೆಲಸ ನೀಡಬೇಕು. ಮಗ ಮತ್ತು ಅಲ್ಲಿರುವ 15 ಕುಟುಂಬಗಳಿಗೆ ಜೀತ ವಿಮುಕ್ತಿ ಮಾಡಬೇಕು. ದುಷ್ಕೃತ್ಯದ ಮಾಡಿರುವ ಆರೋಪಿಗಳನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನಾ ನೇತೃತ್ವವನ್ನು ಹೊಂಬಯ್ಯ,ಕಬ್ಬಾಳಯ್ಯ, ಮೂರ್ತಿ, ಯೋಗೇಶ್,ಬೋರಯ್ಯ,ರಾಜಣ್ಣ, ಮಾದೇಶ್, ಅಂಬರೀಷ್, ರವಿ, ಇತರೆ ದಲಿತ ಪರ ಸಂಘಟನೆಗಳು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401