ದಿನದ ಸುದ್ದಿ

ಪೋಲಿಸ್ ಸಬ್-ಇನ್ಸ್‍ಪೆಕ್ಟರ್ ಅರ್ಜಿ ಸಲ್ಲಿಕೆ ತಾತ್ಕಾಲಿಕ ಸ್ಥಗಿತ

Published

on

ಸುದ್ದಿದಿನ,ಕೋಲಾರ: ನಂ. 15-179,2019-20 ಮತ್ತು 2020-21 ನೇ ಸಾಲಿನ ನೇಮಕಾತಿಗೆ ಸಂಬಂಧಿಸಿದಂತೆ, ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಸಬ್-ಇನ್ಸ್‍ಪೆಕ್ಟರ್ (ಸಿವಿಲ್)-431 ಮತ್ತು ಪೊಲೀಸ್ ಸಬ್-ಇನ್ಸ್‍ಪೆಕ್ಟರ್ (ಸಿವಿಲ್) (ಕಲ್ಯಾಣ ಕರ್ನಾಟಕ)-125 ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ದಿನಾಂಕ: 01-06-2020 ರಿಂದ 30-06-2020 ರವರೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.

ಆಡಳಿತಾತ್ಮಕ ಕಾರಣಗಳಿಂದಾಗಿ ಅರ್ಜಿ ಆಹ್ವಾನದ ದಿನಾಂಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿರುತ್ತದೆ. ಮುಂದಿನ ಅರ್ಜಿ ಆಹ್ವಾನ ದಿನಾಂಕಗಳನ್ನು ಅಭ್ಯರ್ಥಿಗಳ ಗಮನಕ್ಕೆ ತರಲಾಗುವುದು ಎಂದು ಕೋಲಾರ ಜಿಲ್ಲಾ ಪೋಲಿಸ್ ಅಧೀಕ್ಷಕರಾದ ಕಾರ್ತಿಕ್ ರೆಡ್ಡಿ ಅವರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version