ದಿನದ ಸುದ್ದಿ

ಒಂದೇ ದಿನದಲ್ಲಿ ಪಿಟಿಐನ 297 ಉದ್ಯೋಗಿಗಳಿಗೆ ಗೇಟ್‍ಪಾಸ್

Published

on

ಸುದ್ದಿದಿನ ಡೆಸ್ಕ್: ಸರಕಾರ ಸ್ವಾಮ್ಯದ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ಸಂಸ್ಥೆಯು ಒಂದೇ ದಿನದಲ್ಲಿ ದೇಶದ ವಿವಿಧೆಡೆ ಕಾರ್ಯ ನಿರ್ವಹಿಸುತ್ತಿರುವ 297 ಉದ್ಯೋಗಿಗಳನ್ನು ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಿದೆ.

ಪಿಟಿಐನ ಈ ನಿರ್ಧಾರಕ್ಕೆ ಕಾರಣ ಏನೆಂಬುದು ತಿಳಿದುಬಂದಿಲ್ಲ. ಆದರೆ, ಒಂದೇ ದಿನ ಈ ಪರಿ ಉದ್ಯೋಗಿಗಳನ್ನು ವಜಾಗೊಳಿಸಿರುವುದು ಇದೇ ಮೊದಲು.

ಸಂಸ್ಥೆ ಕೈಗೊಂಡಿರುವ ನಿರ್ಧಾರ ಈಗ ವಿವಾದದ ಸ್ವರೂಪ ಪಡೆದುಕೊಂಡಿದ್ದು, ಇದನ್ನು ವಿರೋಧಿಸಿ ಪಿಟಿಐ ಉದ್ಯೋಗಿಗಳ ಸಂಘವು ತುರ್ತು ಸಭೆ ಹಮ್ಮಿಕೊಂಡಿದ್ದು, ಪ್ರತಿಭಟನೆ ಕೈಗೊಳ್ಳುವುದಾಗಿ ಹೇಳಿದೆ.

ಸೆಪ್ಟೆಂಬರ್ 29ರಂದು ಸಂಸ್ಥೆಯು ತನ್ನ ಅಧಿಕೃತ ವೆಬ್‍ಸೈಟ್‍ನಲ್ಲಿ ಅಧಿಸೂಚನೆ ಹೊರಡಿಸಿದ್ದು, ಸೇವೆಯಿಂದ ವಜಾಗೊಂಡಿರುವ 297 ಉದ್ಯೋಗಿಗಳ ಪಟ್ಟಿಯನ್ನು ಪ್ರಕಟಿಸಿದೆ. ಅಲ್ಲದೇ ಅವರಿಗೆ ಸಲ್ಲ ಬೇಕಿರುವ ಪ್ರಮಾಣ ಪತ್ರಗಳು ಹಾಗೂ ಭತ್ಯೆಗಳು ಪೋಸ್ಟ್ ಮೂಲಕ ತಲುಪಿಸುವುದಾಗಿ ಅಧಿಸೂಚನೆಯಲ್ಲಿ ತಿಳಿಸಿದೆ.

Trending

Exit mobile version