ದಿನದ ಸುದ್ದಿ
ಪಬ್ಲಿಕ್ ಟಿವಿ ಚರ್ಚೆ | ‘ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರನ್ನು ಗುಂಡಕ್ಕಿ ಕೊಲ್ಲಬೇಕು’ : ಪ್ರಚೋದನೆಕಾರಿ ಹೇಳಿಕೆ ನೀಡಿದ ವೀರಣ್ಣ ಎಂಬ ವ್ಯಕ್ತಿ ಮೇಲೆ ಯುವ ಕಾಂಗ್ರೆಸ್ ದೂರು
ಸುದ್ದಿದಿನ,ದಾವಣಗೆರೆ : ಪಬ್ಲಿಕ್ ವಾಹಿನಿಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಕೊಲೆ ಮಾಡಬೇಕು ಎನ್ನುವ ಹೇಳಿಕೆ ನೀಡಿರುವುದನ್ನು ಖಂಡಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ತೆರಳಿ ದೂರು ನೀಡಿದರು.
ಈಚೆಗೆ ಖಾಸಗಿ ವಾಹನಿ ಪಬ್ಲಿಕ್ ಟಿವಿಯಲ್ಲಿ ಚರ್ಚೆ ವೇಳೆ ವೀರಣ್ಣ ಎಂಬ ವ್ಯಕ್ತಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಅವರನ್ನು ಮೊದಲು ಗುಂಡಕ್ಕಿ ಕೊಲ್ಲಬೇಕು ಎನ್ನುವ ಪ್ರಚೋದನೆಕಾರಿಯಾಗಿ ಹೇಳಿಕೆ ನೀಡಿದ್ದಾರೆ. ಅದ್ದರಿಂದ ಇವರ ವಿರುದ್ದ ಕಾನೂನು ಕ್ರಮ ಜರುಗಿಸಬೆಕು ಎಂದು ಒತ್ತಾಯಿಸಿದರು.
ಈ ವೇಳೆ ಸಿದ್ದೇಶ್. ವೈ, ಮಂಜುನಾಥ .ಎಂ ,ಆರ್ ಮಾಯಕೊಂಡ ಮೈನಾರಿಟಿ ಬ್ಲಾಕ್ ಅಧ್ಯಕ್ಷ ಸುಹೀಲ್, ಹರೀಶ್ ಎಚ್ ಆರ್ , ನಾಸಿರ್ , ಸದ್ದಾಂ, ಶಿವಣ್ಣ ಇತರರು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243