ದಿನದ ಸುದ್ದಿ

ದಾವಣಗೆರೆ | ದ್ವಿತೀಯ ಪಿಯು ಫಲಿತಾಂಶ : ಅಗ್ರಸ್ಥಾನ ಪಡೆದ ವಿದ್ಯಾರ್ಥಿಗಳು

Published

on

ಸುದ್ದಿದಿನ,ದಾವಣಗೆರೆ : ದಾವಣಗೆರೆ ಜಿಲ್ಲೆಯ ದ್ವೀತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆ-2022ರ ಸಂಯೋಜನೆವಾರು ಅತೀ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ವಿವರ ಇಂತಿವೆ.

ಕಲಾ ವಿಭಾಗದಲ್ಲಿ ನ್ಯಾಮತಿ ತಾಲ್ಲೂಕಿನ ಬೆಳಗುತ್ತಿಯ ಶ್ರೀ ತೀರ್ಥಲಿಂಗೇಶ್ವರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಪ್ರಿಯಾಂಕ.ಡಿ.ಆರ್ ಶೇ.97.5(585) ಅಂಕ ಗಳಿಸಿ ಪ್ರಥಮ ಸ್ಥಾನ, ಜಗಳೂರು ತಾಲ್ಲೂಕಿನ ಕಮಂಡಲಗೊಂದಿ ವಾಸುದೇವರೆಡ್ಡಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಲಕ್ಷ್ಮೀ ಜಿ.ಟಿ ಶೇ.96.3(578) ದ್ವೀತಿಯ ಸ್ಥಾನ, ನಾಲಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಭವಾನಿ ಜಿ.ಟಿ ಶೇ.95.83(575) ಹಾಗೂ ಹರಿಹರ ತಾಲ್ಲೂಕಿನ ಗಿರಿಜಮ್ಮ ಕಾಂತಪ್ಪ ಶ್ರೇಷ್ಠಿ ಮಹಿಳಾ ಕಾಲೇಜಿನ ವಿದ್ಯಾರ್ಥಿ ಸಪೂರಾಭಾನು ಶೇ.95.83(575) ತೃತಿಯ ಸ್ಥಾನವನ್ನು ಪಡೆದಿರುತ್ತಾರೆ.

ವಾಣಿಜ್ಯ ವಿಭಾಗದಲ್ಲಿ ದಾವಣಗೆರೆ ಎಸ್‍ಎಂವಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಜೀಯಾ ಎಂ ಚೈನ್ ಶೇ.98.16(589) ಅಂಕಗಳನ್ನು ಪಡೆದು ಪ್ರಥಮ ಸ್ಥಾನ, ಆರ್.ಜಿ.ಕಾಲೇಜಿನ ವಿದ್ಯಾರ್ಥಿ ದಿಶಾ ಅ ಜೈನ್ ಶೇ.98 (588)ಹಾಗೂ ಬಾಪೂಜಿ ಎಸ್‍ಪಿಎಸ್‍ಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಚೈತ್ರ ಶೇ.98(588), ಸರ್ ಎಂ.ವಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸೃಷ್ಠಿ ಎಂ.ಎಸ್ ಶೇ.97.83(587), ಹಾಗೂ ಕಾರ್ತಿಕ್.ಜಿ ಶೇ.97.83(587) ಅಂಕಗಳನ್ನು ಪಡೆದು ತೃತಿಯ ಸ್ಥಾನವನ್ನು ಪಡೆದಿರುತ್ತಾರೆ.

ವಿಜ್ಞಾನ ವಿಭಾಗದಲ್ಲಿ ಶಿರಮಾಗೊಂಡನಹಳ್ಳಿಯ ವಿಶ್ವ ಚೇತನ ಪದವಿಪೂರ್ವ ಕಾಲೇಜಿನ ಕಾವ್ಯ ಎಂ.ಜಿ ಶೇ.99.16(595) ಅಂಕಗಳನ್ನು ಪಡೆದು ಪ್ರಥಮ ಸ್ಥಾನ, ಹಾಗೂ ಮುರಿಕಿ ಶ್ರಿ ಬಾರುಣಿ ಶೇ.98.83(593), ಸಿದ್ದಗಂಗಾ ಪದವಿಪೂರ್ವ ಕಾಲೇಜಿನ ವಿನಾಯಕ.ಎಲ್ ಶೇ.98.83(593), ಶಿರಮಾಗೊಂಡನಹಳ್ಳಿಯ ವಿಶ್ವ ಚೇತನ ಪದವಿಪೂರ್ವ ಕಾಲೇಜಿನ ಭುವನ.ಎ ಶೇ.98.83(593) ಅಂಕಗಳನ್ನು ಪಡೆದು ದ್ವೀತಿಯ ಸ್ಥಾನವನ್ನು, ಮಾಗನೂರು ಬಸಪ್ಪ ಪದವಿಪೂರ್ವ ಕಾಲೇಜಿನ ರಕ್ಷಿತ.ಜಿ.ಡಿ ಶೇ.98.66(592) ಅಂಕಗಳನ್ನು ಪಡೆದು ತೃತಿಯ ಸ್ಥಾನವನ್ನು ಪಡೆದಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version