ದಿನದ ಸುದ್ದಿ
ಚನ್ನಗಿರಿ | ಎನ್ ಎಸ್ ಯು ಐ ವತಿಯಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ
ಸುದ್ದಿದಿನ,ಚನ್ನಗಿರಿ : ತಾಲೂಕಿನ ಕಾಂಗ್ರೆಸ್‌ನ ಯುವ ಮುಖಂಡರಾದ ವಡ್ನಾಳ್ ಅಶೋಕ್ ಅವರ ಆದೇಶದ ಮೇರೆಗೆ ಎನ್.ಎಸ್.ಯು.ಐ ಘಟಕದ ವತಿಯಿಂದ ಚನ್ನಗಿರಿಯಲ್ಲಿ ತಾಲೂಕಿನ ವಿವಿಧ ಕಾಲೇಜುಗಳಲ್ಲಿ ದ್ವಿತೀಯ ಪಿಯುಸಿ ಯಲ್ಲಿ 90% ಗಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವ ಪೂರ್ವಕ ಸನ್ಮಾನ ಹಾಗೂ ನಗದು ಬಹುಮಾನವನ್ನು ನೀಡಲಾಯಿತು.
ಕೊರೋನ ಇರುವ ಕಾರಣ ನೇರವಾಗಿ ಅವರವರ ಗ್ರಾಮಗಳಿಗೆ ಭೇಟಿ ನೀಡಿ ಗೌರವಿಸಿದರು.ಎನ್ ಎಸ್ ಯು ಐ ತಾಲೂಕು ಘಟಕದ ಅಧ್ಯಕ್ಷ ರುದ್ರೇಶ್ ಹೊನ್ನೆಮರದಹಳ್ಳಿ, ಪ್ರಧಾನ ಕಾರ್ಯದರ್ಶಿ ರಾಹುಲ್ ಗೌಡ್ರು ಪಾಂಡೋಮಟ್ಟಿ, ಉಪಾಧ್ಯಕ್ಷ ಜಗದೀಶ್, ನಗರ ಅಧ್ಯಕ್ಷರು ಮುಬಾಷೀರ್, ಮಧು ಈರಗನಹಳ್ಳಿ, ಸುನಿಲ್ ಚಿಕ್ಕಹುಲಿಕೆರೆ, ಅಮಿತ್ ಕಾಕನೂರು, ಕುಮಾರಸ್ವಾಮಿ ವಡ್ನಾಳ್,ಅನೂಪ್ ಹಾಗೂ ಸಂತೆಬೆನ್ನೂರು ಕಾಂಗ್ರೆಸ್ ಮುಖಂಡರಾದ ಜಿ.ಎಸ್.ಶಿವರಾಜ್ ಇನ್ನಿತರರು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243