ದಿನದ ಸುದ್ದಿ

ದೇಗುಲದ ಹೊರಗಿನ ಪೂಜೆ ದೇವರನ್ನು ತಲುಪದು!

Published

on

ಸುದ್ದಿದಿನ ಡೆಸ್ಕ್: ದೇಗುಲದ ಹೊರಗೆ ನಡೆಯುವ ಪೂಜೆ ದೇವರನ್ನು ತಲುಪುವುದಿಲ್ಲ. ಹೀಗೆಂದು ಸಾರ್ವಜನಿಕ ಪ್ರಕಟಣೆ ಹೊರಡಿಸಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಖ್ಯಾತ ಕುಕ್ಕೆ ಸುಬ್ರಮಣ್ಯ ಸ್ವಾಮಿ ದೇಗುಲದ ಆಡಳಿತ ಮಂಡಳಿ.
ದೇವಸ್ಥಾನದ ಪ್ರಾಂಗಣವನ್ನು ಹೊರತುಪಡಿಸಿ ಇನ್ನೆಲ್ಲಿಯಾದರೂ ಪೂಜೆ ಮಾಡಿದರೆ ಅದು ದೇವರನ್ನು ತಲುಪುವುದಿಲ್ಲ. ಹಾಗಾಗಿ ಭಕ್ತರು ದೇವಸ್ಥಾನಕ್ಕೆ ಬರಲೇಬೇಕು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ಕುಕ್ಕೆ ಸುಬ್ರಮಣ್ಯಕ್ಕೆ ಬರುವ ಪ್ರವಾಸಿಗರನ್ನು ಮಧ್ಯವರ್ತಿಗಳು ದೇಗುಲದ ಹೊರಗೆ ಪೂಜೆ ಮಾಡಿಸಿ ಕಳಿಸುತ್ತಿರುವ ಕುರಿತು ಕೇಳಿಬಂದ ದೂರಿನ ಅನ್ವಯ ಈ ಪ್ರಕಟಣೆ ಹೊರಡಿಸಲಾಗಿದೆ.
ನದಿ ದಡ, ಮದುವೆ ಹಾಲ್ ಮೊದಲಾದ ಕಡೆ ಪೂಜೆಮಾಡುವುದು ದೇವರನ್ನು ತಲುಪುವುದಿಲ್ಲ ಎಂದು ಈ ಪ್ರಕಟಣೆ ತಿಳಿಸಿದೆ.
ಕುಕ್ಕೆ ಸುಬ್ರಮಣ್ಯ ದೇಗುಲವು ವಿಶ್ವದ ಸಿರಿವಂತ ದೇವಳಗಳಲ್ಲಿ ಒಂದು. ಇದರ ವಾರ್ಷಿಕ ಆದಾಯ 95 ಕೋಟಿ ರೂಪಾಯಿಗಳಾಗಿದೆ. ಭಕ್ತರಿಂದ ವಿವಿಧ ಸೇವೆಗಳಿಗೆ ಸಲ್ಲಿಸುವ ಹಣವೇ ನಲವತ್ತು ಕೋಟಿ ರೂ. ದಾಟುತ್ತದೆ.

Leave a Reply

Your email address will not be published. Required fields are marked *

Trending

Exit mobile version