ಸಿನಿ ಸುದ್ದಿ
ವಿಡಿಯೋ | ಅಭಿಮಾನಿಗಳ ಆಶೀರ್ವಾದಕ್ಕಿಂತ ದೊಡ್ಡ ಗಿಫ್ಟ್ ಇಲ್ಲ : ಪುನೀತ್ ರಾಜ್‍ಕುಮಾರ್
ಸುದ್ದಿದಿನ,ಬೆಂಗಳೂರು: ಅಭಿಮಾನಿಗಳ ಪ್ರೀತಿಗೆ ಏನು ಹೇಳಬೇಕೆಂದು ತೋಚುತ್ತಿಲ್ಲ. ಪ್ರತಿವರ್ಷ ನನ್ನ ಬರ್ತಡೇಯನ್ನ ಅದ್ದೂರಿಯಾಗಿ ಆಚರಿಸುತ್ತಾರೆ.ಫ್ಯಾನ್ಸ್ ತರುವ ಹಲವು ಗಿಫ್ಟ್ ಗಳು ಖುಷಿ ಕೊಡುತ್ತೆ ಎಂದು ಬರ್ತಡೇ ಬಾಯ್ ಪುನೀತ್ ರಾಜಕುಮಾರ್ ಹೇಳಿದರು.
ಈ ವರ್ಷ ಯುವರತ್ನ ಬಿಡುಗಡೆಯಾಗುತ್ತದೆ. ಜೇಮ್ಸ್ ಚಿತ್ರೀಕರಣದ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ. ಜೇಮ್ಸ್ ಮೊದಲ ಪೋಸ್ಟರ್ ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅಭಿಮಾನಿಗಳ ಪ್ರೀತಿಗಿಂತ ಬೇರೆ ಗಿಫ್ಟ್ ಇಲ್ಲ. ಅಭಿಮಾನಿಗಳು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡರೆ ಅದೇ ಖುಷಿ ನನಗೆ ಹಾಗೆ ಸಾಲುಮರದ ತಿಮ್ಮಕ್ಕರಿಗೆ ಪದ್ಮಶ್ರೀ ದೊರಕಿರುವುದು ಖುಷಿ ಕೊಟ್ಟಿದೆ ಈ ವರ್ಷದಿಂದ ಇನ್ನಷ್ಟು ಒಳ್ಳೆಯ ಚಿತ್ರಗಳನ್ನು ಕೊಡಲು ಪ್ರಯತ್ನಿಸುವೆ ಎಂದರು.
ನಂತರ ಅಭಿಮಾನಿಗಳನ್ನ ಭೇಟಿ ಮಾಡಿದ ಅಪ್ಪು ಸಂತಹ ಹಂಚಿಕೊಂಡರು. ಅಭಿಮಾಗಳ ಆಶೀರ್ವಾದಕ್ಕಿಂತ ದೊಡ್ಡ ಗಿಫ್ಟ್ ಇಲ್ಲ.ಪ್ರತೀ ಬಾರಿ ರಾತ್ರಿ ಮನೆಹತ್ರ ಬಂದು ಕಷ್ಟ ಪಡ್ತಿದ್ರು ಹಾಗಾಗಿ ರಾತ್ರಿ ಸೆಲೆಬ್ರೇಷನ್ ಬೇಡ ಅಂದುಕೊಂಡೆ. ಅದಕ್ಕೆ ಅಭಿಮಾನಿಗಳು ಸಹಕರಿಸಿದ್ದಾರೆ ಎಂದರು.
ಯುವರತ್ನ ಚಿತ್ರದಲ್ಲಿ ಕಾಲೇಜ್ ಸ್ಟೂಡೆಂಟ್ ಪಾತ್ರ. ಧಾರವಾಡ ಕಾಲೇಜ್ ನಲ್ಲಿ ಶೂಟಿಂಗ್ ಮಾಡಿದ್ವಿ ಸಾಕಷ್ಟು ಕಲಿತಿದ್ದೇನೆ. ಇನ್ನೂ ಇವತ್ತು ಜೇಮ್ಸ್ ಚಿತ್ರದ ಟೀಸರ್ ಕೂಡ ರಿಲೀಸ್ ಆಗ್ತಿದೆ.ಚಿಕ್ಕ ವಯಸ್ಸಿಂದಲೂ ಗಿಫ್ಟ್ ಅಂದ್ರೆ ಇಷ್ಟ. 18 ವರ್ಷದವನಿದ್ದಾಗ ಅಪ್ಪ ಅಮ್ಮ ನನಗೆ ಕಾರ್ ಗಿಫ್ಟ್ ಕೊಟ್ಟಿದ್ರು ಅದೇ ನಾನು ಮರೆಯಲಾಗದ ಗಿಫ್ಟ್ ಎಂದರು.
ಇನ್ನೂ ಈಗ ಬೇಸಿಗೆ ಬಂದಿದೆ ನಾವುಗಳೆಲ್ಲಾ ಕಾಡು ಕಡಿದು ಮನೆ ಮಾಡಿಕೊಂಡಿದ್ದೇ
ಎಲ್ಲರೂ ಮನೆ ಮುಂದೆ ನೀರಿಟ್ಟು ಪ್ರಾಣಿ ಪಕ್ಷಿಗಳಿಗೆ ಸಹಾಯ ಮಾಡಿ ಎಂದರು ಪುನೀತ್ ರಾಜ್ ಕುಮಾರ್.
ಸುದ್ದಿದಿನ.ಕಾಂ|ವಾಟ್ಸಾಪ್|9986715401