ಸಿನಿ ಸುದ್ದಿ
ಸದ್ದಿಲ್ಲದೆ ತುಳು ಸಿನಿಮಾದಲ್ಲಿ ಹಾಡಿದ ಪವರ್ ಸ್ಟಾರ್
ಸುದ್ದಿದಿನ ಡೆಸ್ಕ್: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಧ್ವನಿ ಈಗ ತುಳು ಸಿನಿಮಾ ಪ್ರಿಯರನ್ನೂ ಆಕರ್ಷಿಸಿದೆ. ಪುನೀತ್ ಅವರು ಸದ್ದಿಲ್ಲದೆ ತುಳು ಸಿನಿಮಾಗಾಗಿ ಹಾಡಿದ್ದು, ಈಗ ಆ ಹಾಡು ಕೋಸ್ಟಲ್‍ವುಡ್‍ನಲ್ಲಿ ಧೂಳೆಬ್ಬಿಸಿದೆ.
ನಮ್ಮ ಜತೆಯೇ ಇದ್ದು, ಭಾಷೆ ಬೇರೆಯಾದ ಕಾರಣ ಪರಕೀಯ ಮನೋಭಾವ ತಾಳಿದ್ದ ತುಳು ಸಿನಿಮಾ ರಂಗ ಕನ್ನಡದವರಿಗೂ ಹತ್ತಿರವಾಗಲು ಇದು ಒಂದು ಪ್ರಮುಖ ಹೆಜ್ಜೆಯಾಗಿದೆ.
ಸಾಮಾನ್ಯವಾಗಿ ತುಳು ಸಿನಿಮಾಗಳನ್ನು ಕರಾವಳಿ ಪ್ರದೇಶದವರನ್ನು ಹೊರತುಪಡಿಸಿ ಬಹುತೇಕರು ನೋಡುವುದಿಲ್ಲ. ಈಗ ಪುನೀತ್ ಅವರು ಹಾಡಿದ್ದಾರೆ ಎಂಬ ಕಾರಣಕ್ಕಾದರೂ ಈ ಸಿನಿಮಾ ಕನ್ನಡಿಗರಿಗೆ ಹತ್ತಿರವಾಗುತ್ತದೆ.
ಅಂದಹಾಗೆ ಉಮೀಲ್ ಚಿತ್ರವು ಕರಾವಳಿಯ ಮೊದಲ ಗ್ರಾಫಿಕ್ ಸಿನಿಮಾ ಆಗಿದೆ. ಚಿತ್ರವು ಸಂಪೂರ್ಣ ಗ್ರಾಫಿಕ್‍ನಿಂದ ಕೂಡಿದೆ. ಸಿನಿಮಾದ ಟೈಟಲ್ ಟ್ರ್ಯಾಕ್‍ಅನ್ನು ಪುನೀತ್ ಅವರೇ ಹಾಡಿದ್ದಾರೆ. ಉಮೀಲ್ ಅಂದರೆ ತುಳುವಿನಲ್ಲಿ ಸೊಳ್ಳೆ ಎಂದರ್ಥ.
ಜಿಯೊ ಮ್ಯೂಸಿಕ್‍ನಲ್ಲಿ ಸಿನಿಮಾದ ಟೈಟಲ್ ಟ್ರ್ಯಾಕ್ ಅಬ್ಬರಿಸಿದ್ದು, ಸಾಕಷ್ಟು ಜನರು ಹಾಡನ್ನು ಈಗಾಗಲೇ ಕೇಳಿದ್ದಾರೆ.