ದಿನದ ಸುದ್ದಿ

ದಲಿತ ಕಾಲೋನಿಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ

Published

on

ಸುದ್ದಿದಿನ,ಮಂಡ್ಯ :ಜಿಲ್ಲೆಯ ಬಸರಾಳು ಹೋಬಳಿ ವ್ಯಾಪ್ತಿಯ ಮುತ್ತೇಗೆರೆ ಗ್ರಾಮದಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಎಂ ಶ್ರೀನಿವಾಸ್ ರವರು ಎಸ್.ಸಿ.ಪಿ.ಯೋಜನೆಯಡಿಯಲ್ಲಿ ಮುತ್ತೇಗೆರೆ ಗ್ರಾಮದ ದಲಿತ ಕಾಲೋನಿ ಮತ್ತು ಹುನುಗನಹಳ್ಳಿ ಗ್ರಾಮಗಳಲ್ಲಿ ಎರಡು ಶುದ್ದ ಕುಡಿಯುವ ನೀರಿನ ಘಟಕಗಳ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಸರ್ಕಾರದಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದರಿಗೆ ಹಲವಾರು ಯೋಜನೆಗಳು ಇದ್ದು ಮತ್ತು ಗ್ರಾಮ ಪಂಚಾಯಿತಿಯಲ್ಲು ಹಲವು ಸಹಾಯ ಧನವು ದೊರಕುವುದರಿಂದ ಉಪಯೋಗಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಶ್ರೀಮತಿ ಲಾವಣ್ಯ, ಉಪಾಧ್ಯಕ್ಷರಾದ ಶ್ರೀ ಮತಿ ಸುಬ್ಬಲಕ್ಷ್ಮಿ, PDO.ಎಸ್.ರಾಮಕೃಷ್ಣ, AEE ಬಸವರಾಜು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಮುಖಂಡರುಗಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version