ದಿನದ ಸುದ್ದಿ

ಉತ್ತಮ ಭವಿಷ್ಯಕ್ಕಾಗಿ ಪಕ್ಕಾ ಮನೆ ಅಡಿಪಾಯ : ಪ್ರಧಾನಿ ಮೋದಿ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ಡೆಸ್ಕ್ : ಉತ್ತಮ ಭವಿಷ್ಯಕ್ಕಾಗಿ ಪಕ್ಕಾ ಮನೆ ಅಡಿಪಾಯ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.

ಅವರು, ಪ್ರಧಾನಮಂತ್ರಿ ಆವಾಸ್ ಯೋಜನೆಯ ಫಲಾನುಭವಿಯೊಬ್ಬರಿಗೆ ಬರೆದಿರುವ ಪತ್ರದಲ್ಲಿ, ಯೋಜನೆಯ ಫಲಾನುಭವಿಗಳ ಬದುಕಿನ ಸ್ಮರಣೀಯ ಕ್ಷಣಗಳು ದೇಶಕ್ಕೆ ನಿರಂತರ ಮತ್ತು ಅವಿರತವಾಗಿ ಶ್ರಮಿಸಲು ಸ್ಫೂರ್ತಿ ನೀಡುತ್ತವೆ ಎಂದು ಹೇಳಿದ್ದಾರೆ.

ಪಕ್ಕಾ ಮನೆಯು ಕೇವಲ ಇಟ್ಟಿಗೆ ಮತ್ತು ಸಿಮೆಂಟ್‌ನಿಂದ ಕಟ್ಟಿದ ಕಟ್ಟಡ ಮಾತ್ರವಲ್ಲ, ಇದರಲ್ಲಿ ಭಾವನೆ, ಆಶೋತ್ತರಗಳು ಸೇರಿವೆ. ಮನೆಗೆ ತಡೆಗೋಡೆ ನಿರ್ಮಾಣ ಕೇವಲ ಭದ್ರತೆ ಒದಗಿಸುವುದಷ್ಟೇ ಅಲ್ಲದೆ, ನಾಳಿನ ಉತ್ತಮಕ್ಕಾಗಿ ವಿಶ್ವಾಸವನ್ನು ಸಹ ತುಂಬುತ್ತದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

ಪ್ರಧಾನಮಂತ್ರಿ ಆವಾಸ್ ಯೋಜನೆಯ ಫಲಾನುಭವಿ ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಸುಧೀರ್ ಕುಮಾರ್ ಜೈನ್ ಅವರನ್ನು ಪ್ರಧಾನಮಂತ್ರಿ ಅಭಿನಂದಿಸಿ, ಪತ್ರ ಬರೆದಿದ್ದು, ತಾವು ಸ್ವಂತ ಸೂರು ಹೊಂದಿರುವುದಕ್ಕೆ ಪಡುತ್ತಿರುವ ಸಂತೋಷಕ್ಕೆ ಬೆಲೆ ಕಟ್ಟಲಾಗದು ಎಂದು ಹೇಳಿದ್ದಾರೆ.

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಕೋಟ್ಯಂತರ ಫಲಾನುಭವಿಗಳು ಪಕ್ಕಾ ಮನೆಗಳನ್ನು ಪಡೆದಿದ್ದಾರೆ. ಮನೆಯಿಲ್ಲದ ಎಲ್ಲ ಕುಟುಂಬಗಳಿಗೆ ಮನೆಗಳನ್ನು ಒದಗಿಸುವ ಗುರಿಗೆ ಸರ್ಕಾರ ಬದ್ಧವಾಗಿದೆ. ಅನೇಕ ಸಾರ್ವಜನಿಕ ಕಲ್ಯಾಣ ಯೋಜನೆಗಳ ಮೂಲಕ ದೇಶವಾಸಿಗಳ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ ಎಂದು ಅವರು ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version