ದಿನದ ಸುದ್ದಿ

ಕ್ವಾರಂಟೈನ್ ಮುಗಿಸಿ ಮನೆಗೆ ತೆರಳುತ್ತಿದ್ದ ವ್ಯಕ್ತಿ ಸಾವು..!

Published

on

ಸುದ್ದಿದಿನ,ಕಲಬುರಗಿ : ಕೊರೊನಾ ಶಂಕೆ ಹಿನ್ನೆಲೆ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿ ಕ್ವಾರಂಟೈನ್ ಅವಧಿಯನ್ನು ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಇದ್ದಕ್ಕಿದ್ದ ಹಾಗೆ ಅಸ್ವಸ್ಥನಾಗಿ ಕುಸಿದು ಬಿದ್ದ ಘಟನೆ ಮಂಗಳವಾರ ಕಲಬುರ್ಗಿ ನಗರದಲ್ಲಿ ನಡೆದಿದೆ.

ಪರಿಣಾಮ ತಕ್ಷಣ ಆತನನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದನೆಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಕ್ವಾರಂಟೈನ್ ಗೊಳಗಾಗಿ ಮನೆಗೆ ತೆರಳುವ ಮುನ್ನವೇ ಸಾವನ್ನಪ್ಪಿದ ವ್ಯಕ್ತಿ ಚಂದ್ರಕಾಂತ್ ನಾಯ್ಕೋಡಿ ಎಂದು ತಿಳಿದು ಬಂದಿದೆ. ಮೃತ ಚಂದ್ರಕಾಂತ್ ಇಲ್ಲಿನ ಇಂದಿರಾನಗರ ನಿವಾಸಿ ಎಂದು ತಿಳಿದು ಬಂದಿದ್ದು, ಬಿಸಿಎಂ ಹಾಸ್ಟೇಲ್ ನಲ್ಲಿ ಕ್ವಾರಂಟೈನ್ ಗೆ ಇರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version