ಸಿನಿ ಸುದ್ದಿ
ಗುಳಿ ಕೆನ್ನೆಯ ಬೆಡಗಿ ರಚಿತಾ ರಾಮ್ಗೆ ಜನ್ಮದಿನದ ಸಂಭ್ರಮ !
ಸುದ್ದಿದಿನ ಡೆಸ್ಕ್: ಕಿರುತೆರೆಯಿಂದ ಬಂದು ಬೆಳ್ಳಿತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಗುಳಿ ಕೆನ್ನೆಯ ಬೆಡಗಿ ರಚಿತಾ ರಾಮ್ಗೆ ಇಂದು ಜನ್ಮದಿನದ ಸಂಭ್ರಮ.
‘ಬುಲ್ ಬುಲ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟು ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ರಚಿತಾ ಇಂದು 26ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ‘ಅಯೋಗ್ಯ’ ಚಿತ್ರದ ಸಕ್ಸಸ್ನ ಖುಷಿಯಲ್ಲಿರುವ ರಚಿತಾ ಅಭಿನಯದ ‘ನಟಸಾರ್ವಭೌಮ’, ‘ಐ ಲವ್ ಯೂ’ ಹಾಗೂ ‘ಸೀತಾರಾಮ್ ಕಲ್ಯಾಣ್’ ಚಿತ್ರಗಳು ಬಿಡುಗಡೆಗೆ ಸಜ್ಜಾಗಿವೆ.