ಕ್ರೀಡೆ

ರಾಹುಲ್ ದ್ರಾವಿಡ್‍ಗೆ ಹಾಲ್ ಆಫ್ ಫೇಮ್ ಗೌರವ

ಭಾರತ ಕ್ರಿಕೆಟ್‍ನ ಮಹಾಗೋಡೆ ಎಂದೇ ಖ್ಯಾತಿ ಹೊಂದಿರುವ ಕನ್ನಡಿಗ ರಾಹುಲ್ ದ್ರಾವಿಡ್ ಅವರು ಐಸಿಸಿ ಕೊಡಮಾಡುವ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿದ್ದಾರೆ.

Published

on

ಸುದ್ದಿದಿನ ಡೆಸ್ಕ್: ಭಾರತ ಕ್ರಿಕೆಟ್‍ನ ಮಹಾಗೋಡೆ ಎಂದೇ ಖ್ಯಾತಿ ಹೊಂದಿರುವ ಕನ್ನಡಿಗ ರಾಹುಲ್ ದ್ರಾವಿಡ್ ಅವರು ಐಸಿಸಿ ಕೊಡಮಾಡುವ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿದ್ದಾರೆ.
ಬೆಂಗಳೂರಿನಲ್ಲಿ ನೆಲೆಸಿರುವ ದ್ರಾವಿಡ್ ಅವರು ಈ ಗೌರವಕ್ಕೆ ಫತ್ರರಾಗಿರುವ ಐದನೇ ಕ್ರಿಕೆಟಿಗರೂ ಹೌದು. ಈ ಮೊದಲು ಸುನೀಳ್ ಗಾವಾಸ್ಕರ್, ಬಿಷನ್ ಸಿಂಗ್ ಬೇಡಿ, ಕಪಿಲ್ ದೇವ್ ಮತ್ತು ಅನಿಲ್ ಕುಂಬ್ಳೆ ಅವರು ಈ ಪ್ರಶಸ್ತಿಗೆ ಪಾತ್ರರಾಗಿದ್ದರು.
ದ್ರಾವಿಡ್ ಅವರೊಂದಿಗೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ರಿಕಿ ಪಾಂಟಿಂಗ್ ಇಂಗ್ಲಡ್ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಕ್ಲೈರಾ ಟೇಲರ್ ಅವರು ಈಬಾರಿ ಪ್ರಶಸ್ತಿ ಪಡೆದುಕೊಳ್ಳುತ್ತಿದ್ದರೆ.
ಐಸಿಸಿಯ ಅತ್ಯುನ್ನತ ಗೌರವ:
ಹಾಲ್ ಆಫ್ ಫೇಮ್ ಎಂಬುದು ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ ಐಸಿಸಿ ಕೊಡುವ ಅತ್ಯುನ್ನತ ಗೌರವ. ಕ್ರಿಕೆಟ್ ಲೋಕದ ದಿಗ್ಗಜರನ್ನು ಗುರುತಿಸುವ ಸಲುವಾಗಿ 2009ರಿಂದ ಈ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ. ಇದುವರೆಗೂ 84 ಮಂದಿ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಹೆಮ್ಮೆಯ ಸಂಗತಿ:
ಸರ್ವಕಾಲಿಕ ಆmಗಾರರ ಪಟ್ಟಿಯಲ್ಲಿ ನನ್ನ ಹೆಸರು ದಾಖಲಾಗಿರುವುದು ಹೆಮ್ಮೆಯ ಸಂಗತಿ. ಇದಕ್ಕಾಗಿ ನನ್ನ ಕೋಚ್‍ಗಳು, ಸ್ನೇಹಿತರು, ಕುಟುಂಬವರ್ಗದವರು ಹಾಗೂ ಐಸಿಸಿ, ಬಿಸಿಸಿಎಲ್‍ಗೆ ಆಭಾರಿಯಾಗಿದ್ದೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *

Trending

Exit mobile version