ದಿನದ ಸುದ್ದಿ

ಶಾಸಕರಿಂದಲೆ ಅತ್ಯಾಚಾರ; ರಾಹುಲ್ ಆರೋಪ

Published

on

 ಸುದ್ದಿದಿನ ಡೆಸ್ಕ್:  ಭೇಟಿಪಡಾವೋ… ಭೇಟಿ ಬಚಾವೋ ಎನ್ನುತ್ತಾರೆ ಮೋದಿಯವರು. ಆದರೆ ಯಾರಿಂದ ಹೆಣ್ಣುಮಕ್ಕಳನ್ನು ರಕ್ಷಿಸಬೇಕು. ಉತ್ತರ ಪ್ರದೇಶ ಮತ್ತು ದೇಶದ ಇತರೆಡೆಗಳಲ್ಲಿ ಬಿಜೆಪಿ ಶಾಸಕರು/ಮುಖಂಡರಿಂದಲೇ ಅತ್ಯಾಚಾರಗಳಾಗುತ್ತಿವೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಈ ಹಿಂದಿನ ಯುಪಿಎ ಸರ್ಕಾರವು ಫ್ರಾನ್ಸ್ ನಿಂದ ಪ್ರತಿ ರ್ಯಾಫಲ್ ಯುದ್ಧ ವಿಮಾನವನ್ನು 565 ಕೋಟಿ ರೂ.ಗಳಿಗೆ ಖರೀದಿಸುವ ಇಂಗಿತ ವ್ಯಕ್ತಪಡಿಸಿತ್ತು. ಆದರೆ, ಮೋದಿ ಸರ್ಕಾರ ಈ 1,600 ಕೋಟಿ ರೂ.ಗಳಿಗೆ ಕೊಳ್ಳಲು ಹೊರಟಿದೆ ಎಂದು ಹೇಳಿದರು.

ಈ ಹಿಂದಿನ ಯುಪಿಎ ಸರ್ಕಾರವು ರ್ಯಾಫಲ್ ಯುದ್ದ ವಿಮಾನಗಳನ್ನು ಕರ್ನಾಟಕದ ಎಚ್ಎಎಲ್ ನಲ್ಲಿ ನಿರ್ಮಿಸಲು ನಿರ್ಧರಿಸಿತ್ತು. ಆದರೆ ಬಿಜೆಪಿ ಆ ಅವಕಾಶ ಕಸಿದುಕೊಂಡಿತು. ಹೀಗಾಗಿ ಕರ್ನಾಟಕದ ಯುವಕರು ನಿರುದ್ಯೋಗಿಗಳಾಗಬೇಕಾದ ದುಃಸ್ಥಿತಿ ನಿರ್ಮಾಣವಾಗಿದೆ.

 

Leave a Reply

Your email address will not be published. Required fields are marked *

Trending

Exit mobile version