ರಾಜಕೀಯ
ರಾಹುಲ್ ಗಾಂಧಿಯೇ ಪ್ರಧಾನಿಯಾಗಲಿ | ಡಿ.ಕೆ.ಶಿ
ಸುದ್ದಿದಿನ, ಬೆಂಗಳೂರು | ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗಮಾಡಿದ ಗಾಂಧಿ ಕುಟುಂಬದ ಕುಡಿ, ರಾಹುಲ್ ಗಾಂಧಿಯವರೇ ಪ್ರಧಾನಿಯಾಗಬೇಕು ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದರು.
ಇಂದು ನಗರದಲ್ಲಿ ಸುದ್ದಿಗಾರರೊದಿಗೆ ಮಾತನಾಡಿದ ಅವರು, ದೇಶದ ಒಳಿತಿಗೆ ಗಾಂಧಿ ಕುಟುಂಬ ಮೊದಲಿನಿಂದಲೂ ತ್ಯಾಗಮಾಡುತ್ತಲೇಬಂದಿದೆ. ಸೋನಿಯಾ ಗಾಂಧಿಯವರು ಮನಸ್ಸು ಮಾಡಿದ್ದಾರೆ ಪ್ರಧಾನಿಯಾಗಬಹುದಿತ್ತು. ಆದರೆ ವ್ಯಕ್ತಿಗಿತಲೂ ದೇಶ ಮುಖ್ಯ ಎಂಬ ಮನಸ್ಸಿರುವ ಅವರು ದೇಶದ ಒಳಿತಿಗೆ ಕೆಲವು ತ್ಯಾಗಗಳನ್ನು ಮಾಡಿದ್ದಾರೆ. ರಾಷ್ಟ್ರದ್ವಜವೇ ನಮ್ಮ ಧರ್ಮ ಎಂದು ಹೇಳಿರುವ ರಾಹುಲ್ ಗಾಂಧಿ ಅವರು ಮುಂದಿನ ಪ್ರಧಾನಿಯಾಗಲಿ ಎಂದು ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401