ರಾಜಕೀಯ
ರಾಹುಲ್ ಗಾಂಧಿ ಬೀದರ್ ನಲ್ಲಿ ಸ್ಪರ್ಧೆ; ಅಂತಹ ಚರ್ಚೆ ಪಕ್ಷದಲ್ಲಿ ನಡೆದಿಲ್ಲ | ಪರಂ
ಸುದ್ದಿದಿನ ಡೆಸ್ಕ್ | ಬೀದರ್ ನಡೆದ ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾಗಿದ್ದು,ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ರಾಹುಲ್ ಗಾಂಧಿ ಸ್ಪರ್ಧೆ ವಿಚಾರವಾಗಿ ಅಂತಹ ಚರ್ಚೆ ಪಕ್ಷದಲ್ಲಿ ನಡೆದಿಲ್ಲ ಎಂದು ಬೆಂಗಳೂರಿನ ಸದಾಶಿವ ನಗರದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾಧ್ಯಮಗಳಿಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ರಾಹುಲ್ ಗಾಂಧಿ ಬೀದರ್ ನಿಂದ ಸ್ಪರ್ಧಿಸುವ ವಿಚಾರವಾಗಿ ಅವರ ವೈಯುಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕರ್ನಾಟಕಕ್ಕೆ ಬರೋದು ಬಿಡೋದು ಅವರಿಗೆ ರಾಹುಲ್ ಗಾಂಧಿಗೆ ಬಿಟ್ಟಿದ್ದು.ಸಮ್ಮಿಶ್ರ ಸರ್ಕಾರದ ಮೇಲೆ ಹಾಸನ- ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತ ರ ಮೇಲೆ ದೌರ್ಜನ್ಯ ನಡೆಯುತ್ತಿದೆ ಅನ್ನೋದು ಸುಳ್ಳು. ಹಾಸನದಲ್ಲಿ ರೇವಣ್ಣ ಅವರಿಂದ ತೊಂದರೆ ಆಗಿದೆ ಆನ್ನೋದು ಸರಿಯಲ್ಲ. ನಿರ್ಧಿಷ್ಟ ಪ್ರಕರಣ ಅಂತ ಹೇಳಿದ್ರೆ ನಾನೇ ಅದನ್ನ ಬಗೆಹರಿಸುತ್ತೇನೆ ಎಂದರು.
ಜಾತಿಗಣತಿ ವರದಿ ಇನ್ನು ಸರ್ಕಾರದ ಕೈ ಸೇರಿಲ್ಲ. ಆಯೋಗ ಅಂತಿಮ ವರದಿ ಕೊಡ್ಲಿ ಆ ಮೇಲೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು.
ಸಮ್ಮಿಶ್ರ ಸರ್ಕಾರದಲ್ಲಿ ಸಾಫ್ಟ್ ಆಗಿಯೇ ಇರಬೇಕಾಗುತ್ತೆ. ಇದು ನನಗೂ ಅನ್ವಯ ಆಗುತ್ತೆ ಕುಮಾರಸ್ವಾಮಿ ಗೂ ಅನ್ವಯ ಆಗುತ್ತೆ.ಬೆಳಿಗ್ಗೆ ಎದ್ರೆ ಜಗಳ ಮಾಡಿಕೊಂಡು ಕೂರಕ್ಕಲ್ಲ.ರಾಜ್ಯದ ಜನರ ಹಿತದೃಷ್ಟಿಯಿಂದ ಸಮ್ಮಿಶ್ರ ಸರ್ಕಾರ ರಚನೆ ಮಾಡಿರೋದು.ಕೆಲವರು ಹೊಟ್ಟೆ ಉರಿಗೆ ಏನ್ ಬೇಕಾದ್ರೂ ಹೇಳಬಹುದು ಎಂದು
ನಿನ್ನೆ ರಾಹುಲ್ ಮುಂದೆ ಅಸಮಾಧಾನ ವ್ಯಕ್ತಪಡಿಸಿದ್ದ ಕಾಂಗ್ರೆಸ್ ನಾಯಕರಿಗೆ ಮಾತಿನ ಮೂಲಕ ಕೈ ನಾಯಕರಿಗೆ ಟಾಂಗ್ ಕೊಟ್ಟರು. ಜಿ. ಪರಮೇಶ್ವರ್.
ಸುದ್ದಿದಿನ.ಕಾಂ|ವಾಟ್ಸಾಪ್|9986715401