ದಿನದ ಸುದ್ದಿ

ರೈಲು ತಡೆ ಚಳವಳಿ ಪ್ರಕರಣ | ರೈತ ಮುಖಂಡ ತೇಜಸ್ವಿ ಪಟೇಲ್ ಗೆ ದಂಡ

Published

on

ಸುದ್ದಿದಿನ, ದಾವಣಗೆರೆ |ರೈತ ಮುಖಂಡ ತೇಜಸ್ವಿ ಪಟೇಲ್, ಹುಚ್ಚವನಳ್ಳಿ ಮಂಜುನಾಥ ಸೇರಿ 10 ಮಂದಿ ರೈತಪರ ಹೋರಾಟಗಾರಿಗೆ ತಲಾ 3 ಸಾವಿರ ರೂ. ದಂಡ ವಿಧಿಸಿ ದಾವಣಗೆರೆಯ 1ಜೆಎಂಎಫ್‌ಸಿ ನ್ಯಾಯಾಲಯ ತೀರ್ಪು ನೀಡಿದೆ.

ರಸಗೊಬ್ಬರ ಪೂರೈಕೆಗೆ ಆಗ್ರಹಿಸಿ 2008ರಲ್ಲಿ ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಹೋರಾಟಗಾರರು ರೈಲು ತಡೆದಿದ್ದರು. ರಸಗೊಬ್ಬರಕ್ಕಾಗಿ ರೈಲು ತಡೆ ಚಳುವಳಿ ಪ್ರಕರಣ ನಡೆದು 9 ವರ್ಷಗಳ ಬಳಿಕ ನ್ಯಾಯಾಲಯ ತೀರ್ಪು ನೀಡಿದೆ. ಒಂದು ವೇಳೆ ದಂಡ ತುಂಬದಿದ್ದರೆ ಮತ್ತೆ ಹತ್ತು ದಿನ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಈ ಕುರಿತಂತೆ ರೈತ ಹೋರಾಟಗಾರರು ಮೇಲ್ಮನವಿ ಹೋಗಲು ನಿರ್ಧರಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version