ದಿನದ ಸುದ್ದಿ

ಸಾವಿರ ವರ್ಷ ಮುಂದಿನ ರೈಲ್ವೆ ಟಿಕೆಟ್ ಕೊಟ್ಟ ದಂಡ ಪೀಕಿದ ಇಲಾಖೆ 

Published

on

ಸುದ್ದಿದಿನ ಡೆಸ್ಕ್: ಟಿಕೆಟ್ ಮೇಲೆ 2013 ಬದಲಾಗಿ 3013 ಎಂದು ನಮೂದಿಸಿ ಪ್ರಯಾಣಿಕರೊಬ್ಬರಿಗೆ ತೊಂದರೆ ಕೊಟ್ಟಿದ್ದ ರೈಲ್ವೆ ಇಲಾಖೆಗೆ ಗ್ರಾಹಕರ ಕೋರ್ಟ್ ದಂಡ ವಿಧಿಸಿದೆ.
ಉತ್ತರ ಪ್ರದೇಶದ ಮೀರತ್‍ನ 73 ವರ್ಷದ ವಿಷ್ಣುಕಾಂತ್ ಶುಕ್ಲಾ ಅವರು 2013ರ ನವೆಂಬರ್ 19ರಂದು ಶಹಪುರ್‍ನಿಂದ ಜಾನುಪುರ್‍ಗೆ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ರೈಲ್ವೆ ಟಿಕೆಟ್ ಪಡೆದಾಗ ಅದರಲ್ಲಿ 3013 ಎಂದು ನಮೂದಿಸಲಾಗಿತ್ತು. ಪರಿಣಾಮವಾಗಿ ಶುಕ್ಲಾ ಅವರನ್ನು ಮಾರ್ಗ ಮಧ್ಯೆ ಇಳಿಸಿ, 800 ರೂಪಾಯಿ ದಂಡ ವಿಧಿಸಲಾಗಿತ್ತು.
ಸ್ನೇಹಿತರೊಬ್ಬರ ಪತ್ನಿ ತೀರಿಕೊಂಡಿದ್ದರಿಂದ ಜಾನುಪುರ್‍ಗೆ ಹೊರಟಿದ್ದ ಶುಕ್ಲಾ ಅವರ ಪ್ರಯಾಣ ವ್ಯತ್ಯಾಸವಾಗಿ ಅವರು ಅಂತಿಮ ದರ್ಶನ ಪಡೆಯಲಿಲ್ಲ.
ಇದೇ ಕೋಪಕ್ಕೆ ಶುಕ್ಲಾ ಅವರು ರೈಲ್ವೆ ಇಲಾಖೆ ವಿರುದ್ಧ ದೂರು ದಾಖಲಿಸಿದ್ದರು. ಅಲ್ಲಿಂದ ವಿಚಾರಣೆ ಪ್ರಾರಂಭವಾಗಿ ಈಗಷ್ಟೆ ತೀರ್ಪು ನೀಡಿರುವ ಕೋರ್ಟ್, ಇಲಾಖೆಗೆ 13 ಸಾವಿರ ರೂಪಾಯಿ ದಂಡ ವಿಧಿಸಿದೆ.

Leave a Reply

Your email address will not be published. Required fields are marked *

Trending

Exit mobile version