ದಿನದ ಸುದ್ದಿ
ರೈಲುಗಳ ಸಂಚಾರಕ್ಕಿನ್ನು ಗೀನ್ ಸಿಗ್ನಲ್ ಇಲ್ಲ
ಸುದ್ದಿದಿನ ದಾವಣಗೆರೆ : ಭಾರತೀಯ ರೈಲ್ವೆ ಇಲಾಖೆಯ ಪ್ರಕಟಣೆ. ನವದೆಹಲಿ: ಕರೋನ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿರುವ ಪ್ರಯಾಣಿಕ ರೈಲುಗಳ ಸಂಚಾರವನ್ನು ಅನಿರ್ದಿಷ್ಟಾವಧಿಯವರಿಗೆ ಮುಂದುವರಿಸಲಾಗಿದೆ.
ಈಗಾಗಲೇ ದೇಶದಲ್ಲಿ ಸಂಚರಿಸುತ್ತಿರುವ 230 ವಿಶೇಷ ರೈಲುಗಳ ಸಂಚಾರ ಎಂದಿನಂತೆ ಮುಂದುವರೆಯಲಿದೆ, ರೈಲುಗಳಲ್ಲಿ ನ ಪ್ರಯಾಣಿಕರ ಸಂಖ್ಯೆಯನ್ನು ಗಮನಿಸಿ ಇದ್ದಲ್ಲಿ ಅಗತ್ಯವಿದ್ದಲ್ಲಿ ಹೆಚ್ಚುವರಿ ರೈಲುಗಳನ್ನು ಓಡಿಸಲಾಗುವುದು ಎಂದು ರೈಲ್ವೆ ಸಚಿವಾಲಯ ತಿಳಿಸಿದೆ, ದೇಶಾದ್ಯಂತ ಕರೊನಾ ಹರಡಿರುವ ಈ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ ತಿಂಗಳಿಂದ ಪ್ರಸ್ತುತ ಅವಧಿಯವರೆಗೆ ರೈಲ್ವೇ ಸೇವೆಯು ಸ್ಥಗಿತಗೊಂಡಿರುವ ಕಾರಣ ಬೊಕ್ಕಸಕ್ಕೆ 40 ಸಾವಿರ ಕೋಟಿಯಷ್ಟು ಹಣ ನಷ್ಟ ಆಗಿರುತ್ತದೆ,
ಈ ಹಿಂದಿನ ಆದೇಶದಂತೆ ಅಗಸ್ಟ್ 12ರವರೆಗೆ ಸ್ಥಗಿತಗೊಂಡಿರುವ ರೈಲ್ವೆ ಸಂಚಾರ ಸಾರ್ವಜನಿಕವಾಗಿ ಆದಷ್ಟು ಬೇಗನೆ ಮುಕ್ತಗೊಳ್ಳುವುದೋ ಕಾದುನೋಡಬೇಕು.
ಸುದ್ದಿದಿನ.ಕಾಂ| ವಾಟ್ಸಾಪ್| 9980346243