ದಿನದ ಸುದ್ದಿ
ಮಳೆಯಿಂದ ಕುಸಿದ ಗುಡ್ಡ ; ರೈಲ್ವೇ ನಿಲ್ದಾಣದಿಂದ ಹೊರಬರಲಾರದೆ ಜೀವನ್ಮರಣ ಸ್ಥಿತಿಯಲ್ಲಿ 16 ರೈಲ್ವೇ ಸಿಬ್ಬಂದಿ | ಕಾರ್ಯಾಚರಣೆ ಆರಂಭ
ಸುದ್ದಿದಿನ ಡೆಸ್ಕ್ |ನಿರಂತರ ಮಳೆಯಿಂದ ಕುಸಿಯುತ್ತಿರೊ ಗುಡ್ಡ. ಸಕಲೇಶಪುರದ ಯಡಕುಮೇರಿ ರೈಲ್ವೆ ನಿಲ್ದಾಣದಿಂದ ಹೊರ ಬರಲಾಗದೆ ಅಪಾಯದಲ್ಲಿರೊ 16 ಸಿಬ್ಬಂದಿಯ ರಕ್ಷಣೆಯ ಕಾರ್ಯಾಚರಣೆ ಆರಂಭವಾಗಿದೆ.
ಸಕಲೇಶಪುರ ಎ.ಸಿ.ನೇತೃತ್ವದ ತಂಡದಿಂದ ಕಾರ್ಯಾಚರಣೆ ಆರಂಭವಾಗಿದ್ದರೂ, ಹೆಲಿಕಾಪ್ಟರ್ ಕಾರ್ಯಾಚರಣೆ ಸಾಧ್ಯವಾಗದ ಹಿನ್ನೆಲೆ, ಟ್ರಕ್ಕಿಂಗ್ ಪರಿಣಿತರೊಂದಿಗೆ ಕಾರ್ಯಾಚರಣೆ ಶುರುಮಾಡಿದ್ದಾರೆ.
ಪಶ್ಚಿಮ ಘಟ್ಟದ ಟ್ರೆಕ್ಕಿಂಗ್ ಮಾರ್ಗದ ಮೂಲಕ ಹೊರಟ ತಂಡ ಈಗಾಗಲೇ ಸಕಲೇಶಪುರ ತಾಲ್ಲೂಕು ಕಾಗಿನೆರಿ ಮೂಲಕ ತೆರಳಿದೆ. ಮಧ್ಯಾಹ್ನದ ವೇಳೆಗೆ ಅಪಾಯದಲ್ಲಿರೊ ಎಲ್ಲಾ ಸಿಬ್ಬಂದಿ ರಕ್ಷಿಸಿ ಕರೆತರೋ ಸಾಧ್ಯತೆ ಇದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401