ದಿನದ ಸುದ್ದಿ
ಭಾರೀ ಮಳೆ ; ಭೂ ಕುಸಿತ
ಸುದ್ದಿದಿನಡೆಸ್ಕ್:ಕಳೆದ ನಾಲ್ಕು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು ಜನ ಜೀವನ ಅಸ್ಥವ್ಯಸ್ತವಾಗಿದೆ. ಇದರ ಪರಿಣಾಮವಾಗಿ ಹೊನ್ನಾವರ ಬಳಿ ಭಾಸ್ಕೆರಿ ಬಳಿ ಗುಡ್ಡ ಕುಸಿದಿದೆ. ಸಿದ್ದಾಪುರ ತಾಲೂಕಿನ ಹಸ್ವಿಗುಳಿಯಲ್ಲಿ ಮನೆ ಮೇಲೆ ಗುಡ್ಡ ಕುಸಿತ ಸಂಭವಿಸಿದೆ.
ಗುಡ್ಡ ಕುಸಿತ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 206 ಸಂಪೂರ್ಣ ಬಂದ್ ಆಗಿದೆ. ಗುಡ್ಡ ಕುಸಿದು ರಸ್ತೆಗೆ ಉರುಳಿ ಬಿದ್ದಿವೆ. ಹೀಗಾಗಿ ಕಾರವಾರದಿಂದ ಬೆಂಗಳೂರು ತೆರಳುವವರಿಗೆ ಸಂಚಾರ ಸಮಸ್ಯೆ ಉಂಟಾಗಿದೆ. ಇತ್ತ ಸಿದ್ದಾಪುರ ತಾಲೂಕಿನ ಹಸ್ವಿಗುಳಿಯಲ್ಲಿ ಮನೆ ಮೇಲೆ ಗುಡ್ಡ ಕುಸಿತ ಸಂಭವಿಸಿದೆ.
ಹಸ್ವಿಗುಳಿಯ ವೆಂಕಟರಮಣ ತಿಮ್ಮ ನಾಯ್ಕ, ಸದಾನಂದ ತಿಮ್ಮ ನಾಯ್ಕ ಹಾಗೂ ಪಾರ್ವತಿ ತಿಮ್ಮನಾಯ್ಕನವರ ವಾಸದ ಮನೆಯ ಹಿಂಬಾಗದಲ್ಲಿ ಗುಡ್ಡ ಕುಸಿತ ಆಗಿದೆ. ಅತಿಯಾದ ಮಳೆಯಿಂದಾಗಿ ಗುಡ್ಡ ಕುಸಿದಿದ್ದು ಮನೆಗಳಿಗೆ ಹಾನಿ ಸಂಭವಿಸುವ ಸಾಧ್ಯತೆ ಇದೆ. ಗುಡ್ಡ ಕುಸಿತಯುತ್ತಿರುವ ಮನೆಗಳ ಹಿಂಭಾಗದಲ್ಲಿ ಯಾರು ಹೋಗದಂತೆ ತಾಲೂಕು ಆಡಳಿತ ಎಚ್ಚರಿಕೆ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243