ದಿನದ ಸುದ್ದಿ

ದಾವಣಗೆರೆ ಜಿಲ್ಲೆಯಲ್ಲಿ ಸರಾಸರಿ 4.0 ಮಿ.ಮೀ ಮಳೆ

Published

on

ಸುದ್ದಿದಿನ,ದಾವಣಗೆರೆ : ಜಿಲ್ಲೆಯಲ್ಲಿ ಮೇ.31 ರಂದು 4.0 ಮಿ.ಮೀ ಸರಾಸರಿ ಮಳೆಯಾಗಿದ್ದು, ಒಟ್ಟು ಅಂದಾಜು ರೂ. 1.15 ಲಕ್ಷ ನಷ್ಟ ಸಂಭವಿಸಿದೆ.

ಮಳೆಯ ವಿವರ

  1. ಚನ್ನಗಿರಿ 2.0 ಮಿ.ಮೀ ವಾಡಿಕೆ ಮಳೆಗೆ 5.0 ಮಿ.ಮೀ ವಾಸ್ತವ ಮಳೆಯಾಗಿದೆ.
  2. ದಾವಣಗೆರೆ ಜಿಲ್ಲೆಯಲ್ಲಿ 4.0 ಮಿ.ಮೀ ವಾಡಿಕೆಗೆ 5.0 ಮಿ.ಮೀ ವಾಸ್ತವ ಮಳೆ.
  3. ಹರಿಹರ 6.0 ಮಿ.ಮೀ ವಾಡಿಕೆಗೆ 9.0 ಮಿ.ಮೀ ವಾಸ್ತವ ಮಳೆ.
  4. ಹೊನ್ನಾಳಿ 5.0 ಮಿ.ಮೀ ವಾಡಿಕೆಗೆ 5.0 ಮಿ.ಮೀ ವಾಸ್ತವ ಮಳೆ.
  5. ಜಗಳೂರು 3.0 ಮಿ.ಮೀ ವಾಡಿಕೆಗೆ 0.0 ಮಿ.ಮೀ ವಾಸ್ತವ ಮಳೆಯಾಗಿದ್ದು, ಜಿಲ್ಲೆಯಲ್ಲಿ ಸರಾಸರಿ ಒಟ್ಟು 4.0 ಮಿ.ಮೀ ವಾಡಿಕೆಗೆ 4.0 ಮಿ.ಮೀ ವಾಸ್ತವ ಮಳೆಯಾಗಿದೆ.

ಜಿಲ್ಲೆಯಲ್ಲಿ ಒಟ್ಟಾರೆ ಅಂದಾಜು ರೂ. 1.70 ಲಕ್ಷ ನಷ್ಟ ಸಂಭವಿಸಿದೆ. ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ 4 ಪಕ್ಕಾ ಮನೆಗಳು ಭಾಗಶಃ ಹಾನಿಯಾಗಿದ್ದು, ರೂ. 40 ಸಾವಿರ ಹಾಗೂ 30.0 ಎಕರೆ ಬಾಳೆ ಹಾಗೂ ತೆಂಗು ಬೆಳೆ ಹಾನಿಯಾಗಿದ್ದು, ರೂ. 75 ಸಾವಿರ ನಷ್ಟ ಸೇರಿದಂತೆ ಒಟ್ಟು ರೂ.1.15 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿ 4 ಪಕ್ಕಾ ಮನೆಗಳು ಭಾಗಶಃ ಹಾನಿಯಾಗಿದ್ದು, ರೂ. 55 ಸಾವಿರ ಅಂದಾಜು ನಷ್ಟ ಸಂಭವಿಸಿರುತ್ತದೆ.

ಸರ್ಕಾರದ ಮಾರ್ಗಸೂಚಿ ಅನ್ವಯ ಸಂತ್ರಸ್ತರಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version