ದಿನದ ಸುದ್ದಿ

ರಾಜ್ಯದ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಭಾರೀ ಮಳೆ

Published

on

ಸುದ್ದಿದಿನ ಡೆಸ್ಕ್ : ರಾಜ್ಯದ ಕರಾವಳಿ ಮತ್ತು ಒಳನಾಡಿನ ಕೆಲವು ಕಡೆ ಮಳೆಯಾಗಿದೆ.

ಧರ್ಮಸ್ಥಳ, ಕಾರವಾರ, ಬಿ ಬಾಗೇವಾಡಿ, ಯಡವಾಡ, ದಾವಣಗೆರೆಯಲ್ಲಿ ತಲಾ 3 ಸೆಂಟಿಮೀಟರ್, ಕುಂದಾಪುರ, ಪುತ್ತೂರು ಎಚ್‌ಎಂಎಸ್, ಕಾರ್ಕಳ, ಗೋಕಾಕ, ಸುತಗಟ್ಟಿ ಮತ್ತಿಕೊಪ್ಪ, ಮುಂಡರಗಿ, ಭಾಗಮಂಡಲಗಳಲ್ಲಿ ತಲಾ 2ಸೆಂಟಿಮೀಟರ್, ಕದ್ರಾ, ಕಿರವತ್ತಿ, ಸಿದ್ದಾಪುರ, ಅಕ್ಕಿ ಆಲೂರು, ಹಿಡಕಲ್ ಜಲಾಶಯ, ಗದಗ, ಇಂಡಿ, ಕೊಟ್ಟಿಗೆಹಾರ, ಪೊನ್ನಂಪೇಟೆ, ಮೂರ್ನಾಡು, ಸರಗೂರಿನಲ್ಲಿ ತಲಾ 1 ಸೆಂಟಿ ಮೀಟರ್ ಮಳೆಯಾಗಿದೆ. ಕಲಬುರ್ಗಿಯಲ್ಲಿ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ.

ಮುನ್ಸೂಚನೆಯಂತೆ ಕರಾವಳಿಯ ಎಲ್ಲ ಜಿಲ್ಲೆಗಳು ಮತ್ತು ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ. ಉತ್ತರ ಒಳನಾಡಿನ ಕೆಲವು ಕಡೆ ಮಳೆಯಾಗುವ ಸಾಧ್ಯತೆ. ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣಹವೆ ನಿರೀಕ್ಷಿತ. ಬೆಂಗಳೂರು ಹಾಗೂ ಸುತ್ತಮುತ್ತ ಸಾಮಾನ್ಯವಾಗಿ ಮೋಡ ಕವಿದ ವಾತವಾರಣವಿರಲಿದ್ದು, ಸಂಜೆ ಅಥವಾ ರಾತ್ರಿಯ ವೇಳೆ ಹಗುರದಿಂದ ಸಾಧಾರಣ ಗುಡುಗು ಸಹಿತ ಮಳೆಯಾಗುವ ಸಂಭವವಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version