ದಿನದ ಸುದ್ದಿ

ರಾಜ್ಯದಲ್ಲಿ ಎಲ್ಲಿ‌ ಎಷ್ಟು ಮಳೆ..? : ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್

Published

on

ಸುದ್ದಿದಿನ ಡೆಸ್ಕ್ : ರಾಜ್ಯದ ಬಹುತೇಕ ಕಡೆಗಳಲ್ಲಿ ಮಳೆಯಾಗಿದೆ. ಹಾವೇರಿ ಜಿಲ್ಲೆಯ ಕೆಲವರಕೋಪ್17 , ಸುಬ್ರಹ್ಮಣ್ಯ 16, ಶಿವಮೊಗ್ಗ ಜಿಲ್ಲೆಯ ನಿಡಿಗೆ, ಉಚ್ಚಂಗಿದುರ್ಗದಲ್ಲಿ 12, ಸುಂಟಿಕೊಪ್ಪ, ಮಂಡ್ಯ 11,ದೇವೂರು, ಯಲಬುರ್ಗಾ, ಮುನಿರಾಬಾದ್10, ಮಸ್ಕಿ, ಶನಿವಾರಸಂತೆ, ಸೋಮವಾರಪೇಟೆ, ಚಿತ್ರದುರ್ಗ, ತೊಂಡೆಬಾವಿ, ದಾವಣಗೆರೆ, ಕುರಗೋಡುವಿನಲ್ಲಿ 9.

ಕುಷ್ಠಗಿ, ಸಿಂಧನೂರು, ಕೊಪ್ಪಳ, ಮಧುಗಿರಿ, ಗೌರಿಬಿದನೂರು, ಲಿಂಗನಮಕ್ಕಿ8, ಕಾರ್ಕಳ, ತುಮಕೂರು ಜಿಲ್ಲೆಯ ಮಿಡಿಗೇಶಿ, ಸಂಡೂರು, ಸಕಲೇಶಪುರ, ಬಾಳೆಹೊನ್ನೂರು, ದಾವಣಗೆರೆಯಲ್ಲಿ ತಲಾ 7 ಸೆಂಟಿಮೀಟರ್ ಮಳೆಯಾಗಿದೆ.
ಕಲಬುರಗಿಯಲ್ಲಿ ದಿನದ ಗರಿಷ್ಠ 37 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಗಿದೆ.

ಮುನ್ಸೂಚನೆಯಂತೆ ರಾಜ್ಯಾದ್ಯಂತ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ಸುತ್ತಮುತ್ತ ಮೋಡಕವಿದ ವಾತಾವರಣ, ಒಂದೆರಡು ಬಾರಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ. ಗರಿಷ್ಠ 25, ಕನಿಷ್ಠ 21ಡಿಗ್ರಿ ಸೆಲ್ಷಿಯಸ್ ತಾಪಮಾನ ಸಂಭವ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version