ದಿನದ ಸುದ್ದಿ
ಕೇರಳದಲ್ಲಿ ಮರಣ ಮೃದಂಗ ; 67 ಜನರ ಸಾವು
ಪ್ರಮುಖಾಂಶಗಳು
• 1.5 ಪೀಡಿತರಿಂದ ಪರಿಹಾರಕ್ಕೆ ಮನವಿ
• 14 ಜಿಲ್ಲೆಗಳಲ್ಲಿ ರೆಡ್ ಅಲರ್ಟ್
ಸುದ್ದಿದಿನ ಡೆಸ್ಕ್ | ಕೇರಳದಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಪ್ರವಾಹ ಪರಿಸ್ಥಿತಿ ಹತೋಟಿಗೆ ಬರುತ್ತಿಲ್ಲ. ನಾಗರಿಕ ವಿಮಾನ ಹಾರಾಟವನ್ನು ಶನಿವಾರದವರೆಗೂ ಮುಂದೂಡಿದ್ದು, ಪ್ರವಾಹಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದು, ಬುಧವಾರ 67ಕ್ಕೆ ತಲುಪಿದೆ.
ಕೇರಳ ರಾಜ್ಯದ 14 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದ್ದು, ದಕ್ಷಿಣದ ಕಾಸರಗೋಡಿನಿಂದ ದಕ್ಷಿಣದ ತಿರುವನಂತಪುರ ವರೆಗಿನ ಎಲ್ಲ ನದಿಗಳಲ್ಲಿ ನೀರಿನ ಮೂಲದ 35 ಜಲಾಶಯಗಳು ಭರ್ತಿಯಾಗಿದ್ದು, ಗೇಟ್ ಗಳನ್ನು ತೆರೆಯಲಾಗಿದೆ. ತಮಿಳುನಾಡು ಸರ್ಕಾರ ಮುಳ್ಳಪೆರಿಯಾರ್ ಜಲಾಶಯದ ಹೆಚ್ಚುವರಿ ನೀರನ್ನು ನದಿಗೆ ಬಿಡಲು ತಿಳಿಸಿದೆ.
ಆಗಸ್ಟ್ 8ರಿಂದ ಈವರೆಗೆ ಸಾವಿನ ಸಂಖ್ಯೆ 27ರಿಂದ 67ಕ್ಕೇರಿದೆ. ಇನ್ನು ಕೆಲವು ದಿನಗಳ ವರೆಗೆ ಮಳೆ ಮುಂದುವರಿದಿದ್ದು, ಪರಿಸ್ಥಿತಿ ಗಂಭೀರವಾಗಲಿದೆ. 1.5 ನಿರಾಶ್ರಿತರು ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ ಎಂದು ಎಂದು ಮುಖ್ಯಮಂತ್ರಿ ವಿಜಯ ಪಿಣರಾಯಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401