ದಿನದ ಸುದ್ದಿ

ಮಡಿಕೇರಿ ಭೂಕುಸಿತ | ಶನಿವಾರ ರವಿಕಿರಣ್ ಮೃತದೇಹ ಪತ್ತೆ

Published

on

ಸುದ್ದಿದಿನ,ಮಡಿಕೇರಿ : ಮಡಿಕೇರಿ ತಾಲ್ಲೂಕು ಭಾಗಮಂಡಲದ ತಲಕಾವೇರಿಯ ಗಜಗಿರಿ ಬೆಟ್ಟದಲ್ಲಿ ಆಗಸ್ಟ್ 06 ರಂದು ಉಂಟಾದ ಭೂಕುಸಿತದಿಂದ 05 ಜನರು ಕಣ್ಮರೆಯಾಗಿದ್ದರು. ಈ ಸಂಬಂಧ ಜಿಲ್ಲಾ ಪ್ರಕೃತಿ ವಿಕೋಪ ತಂಡ, ಎನ್‍ಡಿಆರ್‍ಎಫ್, ಎಸ್‍ಡಿಆರ್‍ಎಫ್, ಅರಣ್ಯ, ಅಗ್ನಿಶಾಮಕ ಮತ್ತು ಪೋಲೀಸ್ ಇಲಾಖಾ ತಂಡಗಳು ಪರಿಹಾರ ಕಾರ್ಯಾಚರಣೆ ನಡೆಸುತ್ತಿದ್ದರು.

ಶನಿವಾರವೂ ಸಹ ಸಹ ಜಿಲ್ಲಾ ಪ್ರಕೃತಿ ವಿಕೋಪ ತಂಡ ಎನ್‍ಡಿಆರ್‍ಎಫ್,
ಎಸ್‍ಡಿಆರ್‍ಎಫ್,ಅರಣ್ಯ, ಅಗ್ನಿಶಾಮಕ ಮತ್ತು ಪೆÇಲೀಸ್ ಇಲಾಖಾ ತಂಡಗಳು ಕಾರ್ಯಾಚರಣೆ ನಡೆಸಿದ್ದು, ಕಾಣೆಯಾದವರ ಪೈಕಿ ರವಿಕಿರಣ್ ಎಂಬುವವರ ಮೃತ ದೇಹ ಪತ್ತೆಯಾಗಿದೆ. ಇದರೊಂದಿಗೆ ಕಾಣೆಯಾದ 05 ಜನರ ಪೈಕಿ 03 ಜನರ ಮೃತದೇಹಗಳು ಪತ್ತೆಯಾಗಿದ್ದು, ಉಳಿದ ಇಬ್ಬರ ಹುಡುಕಾಟಕ್ಕೆ ಕಾರ್ಯಾಚರಣೆ ಮುಂದುವರೆಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version