ಲೈಫ್ ಸ್ಟೈಲ್
ಮಳೆಗಾಲದಲ್ಲಿ ಅರಳಿದ ಕಾಮನಬಿಲ್ಲು !
ಒಂದೆಡೆ ಕರಿ-ಬಿಳಿ ಮೋಡಗಳ ಕಣ್ಣಾಮುಚ್ಚಾಲೆ ಆಟ, ಧರೆಗಿಳಿದ ಮಳೆರಾಯನ ಸಂಭ್ರಮ ಇನ್ನೊಂದೆಡೆ. ಪ್ರತಿ ಸೀಸನ್ಗೂ ಒಂದು ವಿಶಿಷ್ಟ ಫ್ಯಾಷನ್ ಹುಡುಕುವ ಫ್ಯಾಷನ್ ಪ್ರಿಯರಿಗೆಂದೇ ಈ ಮಾನ್ಸೂನ್ ಗೆಂದೇ…”ರೈನ್ ಬೋ ಮೇಕಪ್ ಟ್ರೆಂಡ್ ” ರೆಡಿಯಾಗಿದೆ.
ಇದರಲ್ಲಿ ರೈನ್-ಬೋ ಐ ಮೇಕಪ್, ರೈನ್-ಬೋ ಐಲೈನರ್ , ರೈನ್-ಬೋ ಲಿಪ್ಸ್ಟಿಕ್,ರೈನ್-ಬೋ ನೈಲ್ ಆರ್ಟ್, ರೈನ್-ಬೋ ಹೇರ್ ಕಲರ್, ರೈನ್-ಬೋ ಐಬ್ರೋ… ಹೀಗೆ ಬೆಡಗಿನ ರಂಗಿನ ಪ್ರಪಂಚಕ್ಕೆ ಫ್ಯಾಷನ್ ಮಾಂತ್ರಿಕರು “ರೈನ್-ಬೋ ಮೋಡಿ ” ಸದ್ಯಕ್ಕೆ ಹಾಟ್ ಫೇವರಿಟ್ ಎನಿಸಿಕೊಂಡಿದೆ.
ಏನಿದು ರೈನ್-ಬೋ ಮೇಕಪ್?
ಮಳೆಯ ನಂತರ ಆಗಸದಲ್ಲಿ ಮೂಡುವ ವರ್ಣಮಯ ಕಾಮನಬಿಲ್ಲಿನ ರಂಗನ್ನು ಮೇಕಪ್ ಲೋಕ ತನ್ನದೇ ರೀತಿಯಲಿ ಬಳಸಿಕೊಂಡಿದೆ. ನೇರಳೇ, ನೀಲಿ, ಹಸಿರು, ಹಳದಿ, ಕಿತ್ತಳೆ, ಕೆಂಪು.. ಹೀಗೆ.. ಕಾಮನಬಿಲ್ಲಿನಲ್ಲಿನ ಏಳು ಬಣ್ಣಗಳ ಅತ್ಯಾಕರ್ಷಕ ಬೆಡಗಿನ ಚಿತ್ತಾರದ ಅನಾವರಣವೇ ರೈನ್-ಬೋ ಮೇಕಪ್.
ರೈನ್ ಬೋ ಐಲೈನರ್!
ಏಳು ಬಣ್ಣಗಳ ಬಹಳ ನಾಜೂಕಾಗಿ ಐ ಲೈನರ್ ನ ರೂಪದಲ್ಲಿ ಕಣ್ಣು ರೆಪ್ಪೆಯ ಮೇಲೆ ಮೂಡಿಸುವ ಕಲೆ. ಕಾಮನಬಿಲ್ಲ್ಲೇ ಕಣ್ಣ ಮೇಲೆ ಮೂಡಿದೆ ಏನೋ ಎಂಬಂತೆ ಚಿತ್ರಿಸುವ ಮಾಂತ್ರಿಕತೆ ಈ “ರೈನ್-ಬೋ ಐಲೈನರ್ ” ಗಿದೆ.
ರೈನ್-ಬೋ ಐ ಷ್ಯಾಡೋ !
ಹಲವು ವಿಶಿಷ್ಟ ವಿನ್ಯಾಸಗಳಿಗೆ , ಚಿತ್ತಾರದ ರೂಪದಲ್ಲಿ ಐ ಷ್ಯಾಡೋ ಧರಿಸುವುದು ಸದ್ಯದ ಹಾಟ್ ಟ್ರೆಂಡ್ ಆಗಿದೆ. ರೈನ್ಬೋ ಕಲರ್ಸ ಗಳ ಮೋಡಿ ಯನ್ನು ಈ ಕಲೆ ಎತ್ತಿ ಹಿಡಿದಿದೆ.
ರೈನ್-ಬೋ ಗ್ಲಿಟರ್ ಐ ಬ್ರೋ!
Vibgyor ಬಣ್ಣದ ಗ್ಲಿಟರ್ ಐ-ಷ್ಯಾಡೋ ವನ್ನು ಹುಬ್ಬಿನ ಮೇಲೆ ಬ್ರಷ್ ಮೂಲಕ ಹಚ್ಚಿಕೊಂಡು ನಿಮ್ಮ partywear ಗೆ match ಆಗುವ ರೀತಿಯಲ್ಲಿ ಸಿಂಗರಿಸಿಕೊಳ್ಳಿ. Disco party ಹಾಗೂ Ramp ಗಳಲ್ಲಿ ಈ trend ಹೆಚ್ಚಿನ ಬೇಡಿಕೆಯಲ್ಲಿದೆ.
ರೈನ್ ಬೋ ನೈಲ್ ಆರ್ಟ್
ಮಳೆಗಾಲದಲ್ಲಿ ಮೂಡುವ ಕಾಮನಬಿಲ್ಲಿನ ಏಳು ಹಣ್ಣುಗಳನ್ನು ನಿಮ್ಮ ಕೈ ಬೆರಳುಗಳ ಮೇಲೆ ನೈಲ್ ಕಿಟ್ ಬಳಸಿ artistic ಆದ ವಿನ್ಯಾಸಗಳನ್ನು ಬಿಡಿಸಲಾಗುತ್ತದೆ.
ರೈನ್ ಬೋ ಹೇರ್ ಕಲರ್
ಮಾರುಕಟ್ಟೆಗಳಲ್ಲಿ ಸಿಗುವ Rainbow colours ಗಳ Hair colours ಗಳನ್ನು ಕೂದಲಿಗೆ layers ಮಾದರಿಯಲ್ಲಿ ಹಚ್ಚಿಕೊಂಡು ಈ seasonನ trendy hot going Rainbow look ಅನ್ನು ನೀವೂ try ಮಾಡಿ.
ರೈನ್ ಬೋ ಲಿಪ್ಸ್ಟಿಕ್
Multi-coloured lipstick trend ಸದ್ಯ ಸೋಷಿಯಲ್ ನೆಟ್ ವರ್ಕ್ ಗಳಲ್ಲಿ ಬಹಳ ಸುದ್ದಿ ಮಾಡಿದೆ. RAINBOW COLOURS ಗಳ LIPSTICK ಬಳಸಿ ನಿಮ್ಮ ತುಟಿಗಳಿಗೆ ಒಂದು TRENDY LOOK TRY ಮಾಡಿ.
ರೈನ್ ಬೋ ಮೇಕಪ್ ಕಿಟ್
ಮಾರುಕಟ್ಟೆಯಲ್ಲಿ ಈ VIBRANT COLOURS MAKE UP KIT ಸಿಗುತ್ತದೆ. ಈ MONSOON SEASON ನೀವೂ ಕೂಡ ಮನೆಯಲ್ಲೇ ಒಂದು TRENDY LOOK ನ TRY ಮಾಡಿ.
RAINBOW MAKE-UP TRENDS ಸದ್ಯ FACEBOOK ಹಾಗೂ INSTAGRAM ಗಳಲ್ಲಿ ಯುವತಿಯರ ಕ್ರೇಜ್ ಹೆಚ್ಚಿಸಿದೆ.
ಸೋಷಿಯಲ್ ಮೀಡಿಯಾ ಹಂಗಾಮ
ಸೋಷಿಯಲ್ ಮೀಡಿಯಾ ದಲ್ಲಿ Fashion trends ನ ಕ್ರೇಜ್ ಹೆಚ್ಚಿದೆ. Fashion ಪ್ರಿಯರು ಹಾಗೂ Fashion ಮಾಂತ್ರಿಕರು ತಮ್ಮ ಹೊಸ ಟ್ರೆಂಡ್ಗಳನ್ನು ಜನರಿಗೆ ತಲುಪಿಸಲು ಸೋಷಿಯಲ್ ಮೀಡಿಯಾ ಮೊರೆ ಹೋಗಿದ್ದಾರೆ..
ಸದ್ಯ ಈ ಮಳೆಗಾಲಕ್ಕೆ “RAINBOW MAKE-UP TRENDS ” ಸೋಷಿಯಲ್ ಮೀಡಿಯಾ hot favourite ಎನಿಸಿಕೊಂಡಿದೆ.