ದಿನದ ಸುದ್ದಿ

ಹಾಸನದಲ್ಲಿ ಮಳೆ ಆಟ !

Published

on

ಸುದ್ದಿದಿನ ಡೆಸ್ಕ್: ಜಿಲ್ಲೆಯ ಬಹುತೇಕ ಕಡೆ ಧಾರಾಕಾರ ಮಳೆಯಾಗಿದ್ದರೂ,ಅರಕಲಗೂಡು,ಚನ್ನರಾಯಪಟ್ಟಣ, ಅರಸೀಕೆರೆ ತಾಲೂಕಿನ ಹಲವು ಕೆರೆಗಳಿಗೆ ನೀರು ಬಂದಿಲ್ಲ.ಹೀಗಾಗಿ ಶಾಸಕರುಗಳು ನಡೆಸುವ ಗ್ರಾಪಂ,ತಾಪಂ,ಜನಸಂಪರ್ಕ ಸಭೆಯಲ್ಲಿ ಕೆರೆಗೆ ನೀರು ತುಂಬಿಸಿ ಎಂಬ ಆಗ್ರಹ ಕೇಳಿಬರುತ್ತಿದೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಒಟ್ಟು 170 ಕೆರೆಗಳಿವೆ.ಶೇ.30 ಕ್ಕಿಂತ ಕಡಿಮೆ ಪ್ರಮಾಣದಲ್ಲಿ 74 ಕೆರೆಗಳು ತುಂಬಿವೆ.ಶೇ.50 ರಷ್ಟು ನೀರು 14 ಕೆರೆಗಳಿಗೆ ಬಂದಿದೆ.ಶೇ.51 ರಿಂದ ಶೇ.90 ರಷ್ಟು 31 ಕೆರೆ ತುಂಬಿದ್ದರೆ,ಕೇವಲ 8 ಕೆರೆಮಾತ್ರ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಿದೆ.43 ಕೆರೆಗಳು ಭರ್ತಿಯಾಗೇ ಇಲ್ಲ.

137 ಕೆರೆ ತುಂಬಿಲ್ಲ

ಜಿಲ್ಲಾ ಪಂಚಾಯಿತಿ ಹಾಸನ ವಿಭಾಗ ವ್ಯಾಪ್ತಿಯ ಹಾಸನ,ಆಲೂರು,ಸಕಲೇಶಪುರ,ಬೇಲೂರು,ಅರಕಲಗೂಡು ತಾಲೂಕಿನಲ್ಲಿ 2738 ಕೆರೆಗಳಿದ್ದು,137. ಕೆರೆಗಳು ಖಾಲಿಯಾಗಿಯೇ ಇದೆ.

ಶೇ.75 ರಷ್ಟು ನೀರು 897 ಕೆರೆಗೆ ಬಂದಿದ್ದರೆ, ಶೇ.50 ರಿಂದ ಶೇ.70 ರಷ್ಟು 782 ಕೆರೆ,ಶೇ.50 ಕ್ಕಿಂತ ಕಡಿಮೆ 768 ಕೆರೆಗೆ ನೀರು ಬಂದಿದೆ.ಶೇ.20 ಕ್ಕಿಂತ ಕಡಿಮೆ ಪ್ರಮಾಣದಲ್ಲಿ 154 ಕೆರೆಗೆ ನೀರು ಬಂದಿದೆ.ಒಟ್ಡು 137 ಕೆರೆಗಳಿಗೆ ನೀರೆಬಾರದೆ ಖಾಲಿಯಾಗಿಯೇ ಇದೆ. ಬಹುತೇಕ ಕೆರೆಗಳ ಅಚ್ಚುಕಟ್ಟು ಪ್ರದೇಶ ಒತ್ತುವರಿ ಇಲ್ಲವೆ ಖಾಸಗಿ ಲೇಔಟ್ ತಲೆಎತ್ತಿರುವ ಕಾರಣ ನೀರಿನ ಮೂಲವೇ ನಾಶವಾಗಿದೆ ಹೀಗಾಗಿ ಕೆರೆಗಳು ಭರ್ತಿಯಾಗುತ್ತಿಲ್ಲ.

Leave a Reply

Your email address will not be published. Required fields are marked *

Trending

Exit mobile version