ಬಹಿರಂಗ
ಗ್ರಾಮೀಣ ರಾಜಕೀಯ ಮೌಢ್ಯತೆಯ ಒಂದು ಚಿಂತನೆ
- ಆರ್ ಶಂಕ್ರಾನಾಯ್ಕ ನೆಲ್ಲಿಹಂಕಲು, ಚನ್ನಗಿರಿ
ಗ್ರಾಮೀಣ ಭಾಗದಲ್ಲಿ ಮೌಡ್ಯತೆ ಹಾಗೂ ಅನಕ್ಷರಸ್ಥ ಮನಸ್ಸು ಪರಂಪರಾಗತ ಅಂಧ ತತ್ವವನ್ನು ಪ್ರೇರೇಪಿಸಿ,ಪೋಷಿಸಿಕೊಂಡು ರೂಢಿಗತವಾಗಿಸಿ ಕೊಂಡಿರುವಂತೆ,ಅನನ್ಯತೆ ಮತ್ತು ಭಾರತೀಯ ರಾಷ್ಟ್ರೀಯತೆ ಎಂಬುದನ್ನು ಜಾತ್ಯಾತೀತ ರಾಷ್ಟ್ರವಾದ ಭಾರತದೊಳಗೆ ಕೋಮು ವಾದಿ ಧೋರಣೆಯ ಸಂಘ-ಸಂಸ್ಥೆಗಳು ದುರುಪಯೋಗ ಪಡಿಸಿಕೊಳ್ಳುತ್ತಿರುವಂತೆ ಇಂದು ಗೋಚರಿಸುತ್ತಿದೆ.
ಗ್ರಾಮೀಣ ರಾಜಕಾರಣವು ಇದಕ್ಕೆ ಹೊರತಾಗಿಲ್ಲ ಬುದ್ಧ ಬಸವ ಅಂಬೇಡ್ಕರ್ ಗಾಂಧಿ ಮುಂತಾದ ಮಹಾನ್ ಚಿಂತಕರು ಜನಸಾಮಾನ್ಯರ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಅಭಿವೃದ್ಧಿಗಾಗಿ, ಮೌಢ್ಯತೆಯ ಅಳಿವಿಗಾಗಿ ಸಲಹೆ ನೀಡಿ ಶ್ರಮ ವಹಿಸಿದ್ದಾರೆ ಆದರೆ ಅವರ ತತ್ವ ಆದರ್ಶದ ಪ್ರತಿರೂಪಗಳು ಕಣ್ಮರೆಯಾಗಿವೆ ಬೇಂಬಲಿಗರ ಪುಂಗಿ ನಾದಕ್ಕೆ ನರ್ತನವ ಮಾಡುವ ಜನನಾಯಕರು ಸೃಷ್ಟಿಯಾಗಿ ಜನರನ್ನು ಮತ್ತಷ್ಟು ಮೂಢರನ್ನಾಗಿ ಸ್ಥಾಪಿಸಿ ತಮ್ಮ ನಿಯಂತ್ರಣದಲ್ಲಿಟ್ಟು ತಮ್ಮ ತಾಳಕ್ಕೆ ಕುಣಿಯುವವರನ್ನಾಗಿಸಿ ಸಮಸ್ಯೆಗಳನ್ನು ಬಗೆಹರಿಸದೆ ಜೀವಂತವಾಗಿಟ್ಟು ಸಿಂಪತಿ ಗಳಿಸುವವರಾಗಿ ಮೌಲ್ಯಯುತ ಜೀವನ ಮತ್ತು ಮೂಲಭೂತ ಹಕ್ಕು ಮತ್ತು ಸೌಕರ್ಯಗಳಿಂದ ವಂಚಿತರನ್ನಾಗಿಸಿದೆ.
ಗ್ರಾಮಿಣ ಸಮಾಜದ ಸ್ವಾಸ್ಥ್ಯ ಕೆಡಸಿ ಬಡಬಗ್ಗರ ಬದುಕನ್ನು ಬಗ್ಗುಬಡೆದು ಅಶಾಂತಿ,ಗೋಂದಲದ ಜೀವನ ಸೃಷ್ಟಿಸಿ ಲಾಭಪಡೆಯಲು ಉತ್ಸಕರಾಗಿರುತ್ತಾರೆ ಆದ್ದರಿಂದ ಜನಸಾಮಾನ್ಯರು ವಾಸ್ತವ ಧನಾತ್ಮಕ ಚಿಂತನೆಯ ಪ್ರಜ್ಞಾವಂತಿಕೆಯನ್ನು ರೂಢಿಸಿಕೊಂಡು ಅಸಂವಿದಾನಿಕ ರಾಜಕೀಯ ಮೌಢ್ಯಗಳನ್ನು ಮೊಟಕುಗೊಳಿಸಿಕೊಳ್ಳದೆ ಹೋದರೆ ಮಹಾನ್ ಚಿಂತಕರ ಮಹಾನ್ ಆಕಾಂಕ್ಷೆಗಳು,ಚಿಂತನೆಗಳು ಸಾರ್ಥಕಗೊಳ್ಳಲು ಹಾಗೂ ಸುಸ್ಥಿರ-ಸದೃಢ ಸಮಾಜ ನಿರ್ಮಾಣವಾಗಿ ಅಭಿವೃದ್ಧಿ ಹೊಂದಲು ಸಾದ್ಯವಿಲ್ಲ.
ಶೈಕ್ಷಣಿಕ ಚಟುವಟಿಕೆಗಳ ಚುರುಕುಗೋಳಿಸಿದ ಸರ್ಕಾರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ವಿಫಲವಾಗಿದೆ ಎಂಬುದು ಇತ್ತೀಚಿನ ದಿನಗಳ ಸಾರ್ವಜನಿಕ ಚರ್ಚೆಗಳು ಕೇಳಿಬರತ್ತಿದೆ.ಅದರಲ್ಲಿ ಮುಖ್ಯವಾಗಿ ಗ್ರಾಮಿಣ ಭಾಗಕ್ಕೆ ಸಮರ್ಪಕ ರೀತಿಯಲ್ಲಿ ಬಸ್ಸುಗಳ ಸಂಚಾರವಿಲ್ಲದೆ ಸಾರ್ವಜನಿಕರು,ವಿದ್ಯಾರ್ಥಿಗಳು, ಶಿಕ್ಷಕರು,ಪರದಾಡುವಂತಾಗಿದೆ.
ಗ್ರಾಮೀಣಾಭಿವೃದ್ಧಿಯ ಕನಸನ್ನು ಕಂಡಿದ್ದ ಗಾಂಧಿಜಿಯವರನ್ನು ಮರೆಯುವಂತಿಲ್ಲ ಆದರೆ ರಾಜಕೀಯಕ್ಕೆ ನೆನಪು ಮಾತ್ರ ಇಲ್ಲಾ, ಓಟುಗಳ ಗಿಟ್ಟಿಸಿಕೊಳ್ಳುವ ತಂತ್ರ-ಕುತಂತ್ರಗಳಲ್ಲಿ ಆಟಕುಂಟು ಲೆಕ್ಕಕಿಲ್ಲ ಎಂಬಂತೆ ಗಾಂಧಿಯವರ ನಾಮಸ್ಮರಣೆ ಮಾಡಿ ಕಚ್ಚಾಟ ಕಿತ್ತಾಟಗಳಲ್ಲಿ ಲಾಭಕ್ಕಾಗಿ ನಾಮಕಾವಸ್ಥೆ ಬಳಸುವ ಪ್ರವೃತ್ತಿಯನ್ನು ಹೊಂದಿರುತ್ತವೆ ಹೊರತು ನೈಜ ಅಭಿವೃದ್ಧಿ ಪರಮಾನಂದವನ್ನು ಪಸರಿಸುವ ಪರಿಗೆ ಹೋಗದೇ ಮೂಗಿಗೆ ತುಪ್ಪ ಹಚ್ಚುವ ಕೆಲಸವನ್ನು ಮಾಡುತ್ತಾರೆ.
ತಾವು ತಮ್ಮ ಬೆಂಬಲಿಗರು ಅಭಿವೃದ್ಧಿಯ ಉತ್ತುಂಗಕ್ಕೇರಿ ಗಾಂಧಿ ಟೋಪಿ ಹಾಕಿ ಗಾಂಧಿ ವಾದಿಗಳೆಂದು ಅಮಾಯಕ,ಮುಗ್ದರ ಮೇಲೆ ದರ್ಪದ ಪ್ರಭಾವವನ್ನು ತೋರಿ ಗ್ರಾಮದಲ್ಲಿ ಅಜ್ಞಾನ ಬಾವ,ಅನಕ್ಷರತೆ ಮುಂತಾದ ಮೌಡ್ಯಗಳ ನಿವಾರಿಸದೆ ಜೀವಂತ ಇಟ್ಟು ರಾಜಕೀಯ ಮಾಡಿ ನೇಪಮಾತ್ರದೆ ಕಣ್ಣೊರೆಸುವುದರಿಂದ ಮಹನ್ ಚಿಂತಕರಿಗೆ ಮಾಡಿದ ಅಮಾನವೀಯ ಅಪಮಾನ.
(ಆರ್ ಶಂಕ್ರಾನಾಯ್ಕ ನೆಲ್ಲಿಹಂಕಲು
ಚನ್ನಗಿರಿ ತಾಲ್ಲೂಕು
ದಾವಣಗೆರೆ ಜಿಲ್ಲೆ
9900260846
E-mail ID :-snrnaik@gmail.com)
ಸುದ್ದಿದಿನ.ಕಾಂ|ವಾಟ್ಸಾಪ್|9980346243