ಸಿನಿ ಸುದ್ದಿ

ನೀವ್ಯಾರೆಂದು ರಜನಿಕಾಂತ್ ಅವರನ್ನೇ ಹುಡುಗ ಕೇಳಿದ ಯಾಕೆ ಗೊತ್ತಾ?

Published

on

ಸುದ್ದಿ ದಿನ ಡೆಸ್ಕ್: ಸೂಪರ್ ಸ್ಟಾರ್ ರಜನಿಕಾಂತ್ ಯಾರೆಂದು ಪುಟ್ಟ ಮಗುವೂ ಹೇಳುತ್ತದೆ. ಆದರೆ, ಈಗ ಸೂಪರ್ ಸ್ಟಾರ್ ರಜನಿ ಕಾಂತ್ ಯಾರೆಂದು ಕೇಳಿರುವುದು ತಮಿಳುನಾಡಿನ ಯುವಕ. ಛೇ ಹಾಗಂತ ಈತ ಮಾನಸಿಕ ಅಸ್ವಸ್ಥನಲ್ಲ.
ತೂತ್ತುಕುಡಿ ಗೋಲಿಬಾರ್‌ನಲ್ಲಿ ಗಾಯಗೊಂಡಿದ್ದ ಯುವಕ ಸಂತೋಷ್ ಎಂಬಾತನನ್ನು ಚೆನ್ನೈನ ಆಸ್ಪತ್ರೆಯಲ್ಲಿ ರಜನಿಕಾಂತ್ ಭೇಟಿಯಾಗಿದ್ದು, ರಜನಿ ಅವರನ್ನು ಕಂಡ ಕೂಡಲೇ ನೀವು ಯಾರು? ಎಂದು ಸಂತೋಷ್ ಕೇಳಿದ್ದಾನೆ. ಪ್ರಶ್ನೆ ಕೇಳಿ ಅವಾಕ್ಕಾದ ಸೂಪರ್‌ಸ್ಟಾರ್, ನಾನು ರಜನಿಕಾಂತ್ ಎಂದು ಉತ್ತರಿಸಿದ್ದಾರೆ.
ರಜನಿಕಾಂತ್ ಅವರನ್ನೇ ಯಾರೆಂದು ಕೇಳಿದ ಈ ಸನ್ನಿವೇಶ ಫೇಸ್‌ಬುಕ್ ಸೇರಿದಂತೆ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಂದಹಾಗೆ  ಈ ಸನ್ನಿವೇಶ ಸೃಷ್ಟಿಯಾಗಲು ರಜನಿ ಅವರ ಟ್ವೀಟ್ ಕಾರಣ. ‘ತೂತ್ತುಕುಡಿ ಗೋಲಿಬಾರ್ ಪ್ರಕರಣದಲ್ಲಿ ರಾಜಕೀಯ ಮಾಡುತ್ತಿರುವ ಸಮಾಜಘಾತುಕ ಶಕ್ತಿಗಳನ್ನು ಮಟ್ಟಹಾಕಬೇಕು’ ಎಂದು ರಜನಿಕಾಂತ್ ಅವರು ನಿನ್ನೆಯಷ್ಟೆ ಟ್ವೀಟ್ ಮಾಡಿದ್ದರು. ರಜನಿಕಾಂತ್ ಅವರು ಈ ಟ್ವೀಟ್ ಮಾಡಿದ ಮರುಕ್ಷಣದಿಂದಲೇ ಟ್ರೋಲ್‌ಗಳಿಗೆ ಗುರಿಯಾಗಿದ್ದು, ಕಾಲೆಳೆಯುವವರು ಸೂಪರ್‌ಸ್ಟಾರ್ ಅವರನ್ನು ಹುರಿದು ಮುಕ್ಕುತ್ತಿದ್ದಾರೆ.
 #AntiTamilRajinikanth , #NaanThanPaRajinikanth  ಎಂಬ ಹ್ಯಾಶ್ ಟ್ಯಾಗ್‌ನಲ್ಲಿ ರಜನಿ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.

Leave a Reply

Your email address will not be published. Required fields are marked *

Trending

Exit mobile version