ದಿನದ ಸುದ್ದಿ
ತಂತ್ರಜ್ಞಾನ ಬಳಕೆ ಮೂಲಕ ಪರಿಣಾಮಕಾರಿ ಮತ್ತು ಕ್ಷಿಪ್ರ ನ್ಯಾಯ ಪ್ರದಾನ ಸಾಧ್ಯ : ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್
ಸುದ್ದಿದಿನ,ಬೆಂಗಳೂರು: ಕ್ಷಿಪ್ರ ಮತ್ತು ಪರಿಣಾಮಕಾರಿ ನ್ಯಾಯ ಪ್ರದಾನ ಮಾಡುವಲ್ಲಿ ತಂತ್ರಜ್ಞಾನ ಬಳಕೆ ಪ್ರಮುಖ ಪಾತ್ರವಹಿಸುತ್ತದೆ ಎಂದು ಕೇಂದ್ರ ವಿದ್ಯುನ್ಮಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಪ್ರತಿಪಾದಿಸಿದ್ದಾರೆ.
ಬೆಂಗಳೂರು ವಕೀಲರ ಸಂಘ ಕಾನೂನು ವೃತ್ತಿಪರರಿಗೆ ನಿನ್ನೆ ಆಯೋಜಿಸಿದ್ದ ’ತ್ವರಿತ ನ್ಯಾಯದಾನದಲ್ಲಿ ತಂತ್ರಜ್ಞಾನ ಬಳಕೆ’ ವಿಷಯ ಕುರಿತು ಭಾಷಣ ಮಾಡಿದ ಸಚಿವರು, ನ್ಯಾಯಾಂಗ ವ್ಯವಸ್ಥೆಯಲ್ಲಿ ತಂತ್ರಜ್ಞಾನ ಬಳಸುವಲ್ಲಿ ಕರ್ನಾಟಕ ಹೈಕೋರ್ಟ್ ಮುಂಚೂಣಿಯಲ್ಲಿದೆ ಎಂದು ಸಚಿವರು ಶ್ಲಾಘಿಸಿದರು.
ಪ್ರಜಾಪ್ರಭುತ್ವ ಎಂದರೆ ಸೋರಿಕೆ ಎಂದೇ ವ್ಯಾಖ್ಯಾನಿಸಲಾಗುತ್ತಿತ್ತು. ಆದರೆ ಕಳೆದ 6 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಂಪೂರ್ಣವಾಗಿ ತಂತ್ರಜ್ಞಾನದ ಆಧಾರದ ವ್ಯವಸ್ಥೆ ರೂಪಿಸಿದ್ದು, ಫಲಾನುಭವಿಗಳಿಗೆ ಬಿಡುಗಡೆಯಾದ ಪ್ರತಿ ಪೈಸೆಯನ್ನೂ, ಯಾವುದೇ ವಿಳಂಬವಿಲ್ಲದೆ ಅಥವಾ ಸೋರಿಕೆಯಿಲ್ಲದೆ ನೇರವಾಗಿ ಅವರ ಖಾತೆಗೆ ತಲುಪಿಸಲಾಗುತ್ತಿದೆ ಎಂದು ಸಚಿವ ರಾಜೀವ್ ಚಂದ್ರಶೇಖರ್ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243