ದಿನದ ಸುದ್ದಿ
‘300 ಮೊಬೈಲ್’ಗಳನ್ನ ಮರಗಳು ಬಳಸುತ್ತಿದ್ವಾ? : ರಾಜನಾಥ್ ಸಿಂಗ್ ವ್ಯಂಗ್ಯ
ಸುದ್ದಿದಿನ ಡೆಸ್ಕ್ : ಪಾಕಿಸ್ತಾನದ ಬಾಲಾಕೋಟ್ನಲ್ಲಿ ಜೈಷ್ ಶಿಬಿರಗಳ ಮೇಲೆ ನಡೆಸಿದ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ಬಗ್ಗೆ ಚರ್ಚೆ ನಡೆಯುತ್ತಿರೋ ಹಿನ್ನೆಲೆ ಗೃಹಸಚಿವ ರಾಜನಾಥ್ ಸಿಂಗ್ ಕಾಂಗ್ರೆಸ್ಗೆ ಟಾಂಗ್ ನೀಡಿದ್ದಾರೆ.
ವಾಯುಸೇನೆಯ ಮಿರಾಜ್ 2000 ಯುದ್ಧವಿಮಾನ ಬಾಂಬ್ ದಾಳಿ ನಡೆಸುವುದಕ್ಕೂ ಮುನ್ನ ಜೈಷ್ ಶಿಬಿರದಲ್ಲಿ ಸುಮಾರು 300 ಮೊಬೈಲ್ ಫೋನ್ಗಳು ಆ್ಯಕ್ಟೀವ್ ಆಗಿದ್ದವು ಎಂದು ನ್ಯಾಷನಲ್ ಟೆಕ್ನಿಕಲ್ ರಿಸರ್ಚ್ ಆರ್ಗನೈಸೇಷನ್(ಎನ್ಆರ್ಟಿಓ) ಹೇಳಿದೆ.
ಎನ್ಆರ್ಟಿಓ ದೇಶದ ಟಾಪ್ ಟೆಕ್ನಿಕಲ್ ಅನಾಲಿಸಿಸ್ ಮತ್ತು ಗುಪ್ತಚರ ಮಾಹಿತಿ ಸಂಗ್ರಹ ಏಜೆನ್ಸಿ. ಸುಮಾರು 300 ಮೊಬೈಲ್ ಫೋನ್ಗಳು ಆ್ಯಕ್ಟೀವ್ ಆಗಿದ್ದವು ಎಂದು ಎನ್ಆರ್ಟಿಓ ಹೇಳಿದೆ. ಹಾಗಾದ್ರೆ ಈ ಫೋನ್ಗಳನ್ನ ಮರಗಳು ಬಳಸುತ್ತಿದ್ವಾ? ಅಂತ ಪ್ರಶ್ನಿಸಿದ್ದಾರೆ. ಸಾವನ್ನಪ್ಪಿದವರ ನಿರ್ದಿಷ್ಟ ಸಂಖ್ಯೆ ಗೊತ್ತಾಗಬೇಕಾದ್ರೆ ಕಾಂಗ್ರೆಸ್ ಪಾಕಿಸ್ತಾನಕ್ಕೆ ಹೋಗಿ ಲೆಕ್ಕ ಹಾಕಲಿ ಎಂದು ತಿರುಗೇಟು ಕೊಟ್ಟಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401