ದಿನದ ಸುದ್ದಿ

ರಾಮ ಮಂದಿರ ನಿರ್ಮಾಣಕ್ಕೆ ‘ಚಿನ್ನದ ಇಟ್ಟಿಗೆ’ ದಾನ ನೀಡುವೆ : ಹಬೀಬುದ್ಧೀನ್

Published

on

ಸುದ್ದಿದಿನ,ಹೈದರಾಬಾದ್: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುವುದಾದರೆ ತಾವು ಚಿನ್ನದ ಇಟ್ಟಿಗೆಯನ್ನು ದಾನ ಮಾಡುವುದಾಗಿ ಕಡೆಯ ಮೊಘಲ್ ದೊರೆ ಬಹದ್ದೂರ್ ಷಾ ಜಾಫರ್ ಅವರ ವಂಶಸ್ಥ ರಾಜಕುಮಾರ ಹಬೀಬುದ್ದೀನ್ ಟ್ಯೂಸಿ ಹೇಳಿಕೊಂಡಿದ್ದಾರೆ.

1529ರಲ್ಲಿ ಬಾಬರಿ ಮಸೀದಿಯನ್ನು ನಿರ್ಮಿಸಿದ ಮೊದಲ ಮೊಘಲ್ ಚಕ್ರವರ್ತಿ ಬಾಬರ್ ವಂಶಸ್ಥನಾಗಿರುವ ನಾನು ಅಯೋಧ್ಯೆ ಬಾಬರಿ ಮಸೀದಿಯ ಜಾಗಕ್ಕೆ ನಿಜವಾದ ಹಕ್ಕುದಾರನಾಗಿದ್ದೇನೆ. ಹಾಗಾಗಿ ಭೂಮಿಯನ್ನು ನನಗೆ ಹಸ್ತಾಂತರಿಸಬೇಕೆಂದು ಬೇಡಿಕೆ ಇಟ್ಟಿದ್ದಾರೆ.

ಸುಪ್ರೀಂ ಕೋರ್ಟ್ ಬಾಬರಿ ಮಸೀದಿ ಜಾಗವನ್ನು ನನಗೆ ಹಸ್ತಾಂತರಿಸಿದರೆ ಬಾಬರಿ ಮಸೀದಿ ಇರುವ ಜಾಗದಲ್ಲಿ ರಾಮಮಂದಿರ ನಿರ್ಮಾಣ ಮಾಡಲು ನಾನು ಇಡೀ ಜಾಗವನ್ನೇ ದಾನ ನೀಡುತ್ತೇನೆ. ಜತೆಗೆ ದೇವಾಲಯ ನಿರ್ಮಾಣಕ್ಕೆ ಚಿನ್ನದ ಇಟ್ಟಿಗೆಗಳನ್ನು ಸಹ ನೀಡುತ್ತೇನೆ ಎಂದು ಹೇಳಿದ್ದಾರೆ.

Trending

Exit mobile version