ದಿನದ ಸುದ್ದಿ

ಅ.17 ರಿಂದ ‘ ರಾಮದುರ್ಗ ದಸರಾ ಉತ್ಸವ’

Published

on

ಸುದ್ದಿದಿನ,ರಾಮದುರ್ಗ: ನಗರದಲ್ಲಿ ದಸರಾ ಹಬ್ಬದ ಅಂಗವಾಗಿ ಸರಿಗಮಪ ಟ್ರಸ್ಟ್ ವತಿಯಿಂದ “ರಾಮದುರ್ಗ ದಸರಾ ಉತ್ಸವ” ಎಂಬ ಕಾರ್ಯಕ್ರಮದಡಿ ರಾಜ್ಯ ಮಟ್ಟದ ಸಂಗೀತ ಮತ್ತು ನೃತ್ಯ ಸ್ಪರ್ಧೆ ಆಯೋಜನೆ ಮಾಡಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಗಂಗಾಧರ ಭೋಸಲೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.

ನೃತ್ಯ ಸ್ಪರ್ಧೆ ಮತ್ತು ಬಹುಮಾನ

ಅಕ್ಟೋಬರ್ 17 ಮತ್ತು 18 ನೇ ತಾರೀಖಿನಂದು ಸ್ಪರ್ಧೆಗಳು ನಡೆಯಲಿವೆ. ನೃತ್ಯ ಸ್ಪರ್ಧೆಯಲ್ಲಿ ಸಮೂಹ ಮತ್ತು ವಯಕ್ತಿಕ ನೃತ್ಯಗಳಿಗೆ ಅವಕಾಶವಿದ್ದು 17 ನೇ ತಾರೀಖಿನಂದು ನಡೆಯಲಿರುವ ನೃತ್ಯ ಸ್ಪರ್ಧೆಯಲ್ಲಿ ಸಮೂಹ ನೃತ್ಯಕ್ಕೆ ಮೊದಲ ಬಹುಮಾನ 50,000 ರೂಪಾಯಿ ಮತ್ತು ಟ್ರೋಪಿ, ದ್ವಿತೀಯ ಬಹುಮಾನ 25000, ರೂಪಾಯಿ ವಯಕ್ತಿಕ ನೃತ್ಯಕ್ಕೆ ಮೊದಲ ಬಹುಮಾನ 25,000 ರೂಪಾಯಿ ಮತ್ತು ಟ್ರೋಪಿ, ದ್ವಿತೀಯ ಬಹುಮಾನ 15000 ರೂಪಾಯಿ ಬಹುಮಾನವಿರುತ್ತದೆ ನೃತ್ಯ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದವರಿಗೆ “ರಾಮದುರ್ಗ ದಸರಾ ನಾಟ್ಯ ರತ್ನ” ಬಿರುದಿನಿಂದ ಸನ್ಮಾನಿಸಲಾಗುವುದು. 18ನೇ ತಾರೀಖಿನಂದು ಸಂಗೀತ ಗಾಯನ ಕರೋಕೆ ಟ್ರಾಕ್ ಸಿಂಗಿಂಗ್ ಸ್ಪರ್ಧೆ ಇದ್ದು ಮೊದಲ ಬಹುಮಾನ 50,000 ರೂಪಾಯಿ ಮತ್ತು ಟ್ರೋಫಿ ದ್ವಿತೀಯ ಬಹುಮಾನ 25000 ರೂಪಾಯಿ ತೃತೀಯ ಬಹುಮಾನ 15000 ರೂಪಾಯಿ ಇರುತ್ತದೆ ಮೊದಲ ಬಹುಮಾನ ವಿಜೇತರನ್ನು “ರಾಮದುರ್ಗ ದಸರಾ ಗಾನ ಕೋಗಿಲೆ” ಎಂಬ ಬಿರುದಿನಿಂದ ಸನ್ಮಾನಿಸಲಾಗುವುದು.

ಸಿಂಗಿಂಗ್ ಆಡಿಷನ್

ಕರೋಕೆ ಟ್ರಾಕ್ ಸಿಂಗಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿವವರು ಮೊದಲು ಆಡಿಷನ್ ನೀಡಬೇಕಾಗಿದ್ದು ಮೊದಲ ಹಂತದ ಆಡಿಷನ್ ಸಪ್ಟೆಂಬರ್ 23 ಮತ್ತು 30 ಹಾಗೂ ಅಕ್ಟೋಬರ್ 2 ನೇ ತಾರೀಖಿನಂದು ಭಾಗವಹಿಸಬೇಕಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ವಿಜಯ ನಾಯ್ಕ 9945109737, ಮಲ್ಲೇಶ ಬಂಡಿವಡ್ಡರ 9731168316, ತೌಕೀರ ಖತೀಬ 9113561278 ಸಂಪರ್ಕಿಸಲು ಕೋರಲಾಗಿದೆ. 

Trending

Exit mobile version