ದಿನದ ಸುದ್ದಿ

ರಾಮಮಂದಿರ ನಿರ್ಮಾಣ | ತಾಂತ್ರಿಕ ಉಸ್ತುವಾರಿಯಾಗಿ ಕೋಟೆ ನಾಡಿನ ಎಂಜಿನಿಯರ್ ನೇಮಕ ; ಸಚಿವ ರಮೇಶ್ ಜಾರಕಿಹೊಳಿ‌ ಹರ್ಷ

Published

on

ಸುದ್ದಿದಿನ ಡೆಸ್ಕ್ : ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಭವ್ಯ ಶ್ರೀ ರಾಮಚಂದ್ರನ ದೇವಾಲಯದ ತಾಂತ್ರಿಕ ಉಸ್ತುವಾರಿಯಾಗಿ ನೇಮಕವಾಗಿರುವ ದೇಶದ ಹಿರಿಯ ಜಿಯೋ ಟೆಕ್ನಿಕಲ್ ಎಂಜಿನಿಯರ್, ಕನ್ನಡಿಗ ಪ್ರೊ. ಟಿಜಿ ಸೀತಾರಾಮ್‌ ಅವರಿಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಶುಭಾಶಯ ತಿಳಿಸಿದ್ದಾರೆ.

ಗುವಾಹಟಿ ಐಐಟಿ ನಿರ್ದೇಶಕರಾಗಿರುವ ಚಿತ್ರದುರ್ಗ ಮೂಲದ ಪ್ರೊ. ಟಿಜಿ ಸೀತಾರಾಮ್, ಜಿಯೋ ಟೆಕ್ನಿಕಲ್ ಎಂಜಿನಿಯರಿಂಗ್ ನಲ್ಲಿ ನುರಿತ ತಜ್ಞರಾಗಿದ್ದು, ಇವರ ತಂಡದ ಸಲಹೆಯಂತೆಯೇ ‘ಶ್ರೀ ರಾಮ ಮಂದಿರ’ ದ ತಳಪಾಯದ ಕೆಲಸ ನಡೆಯುತ್ತದೆ. ಇವರ ಮಾರ್ಗದರ್ಶನದಲ್ಲಿ ಭವ್ಯವಾದ, ಯಾವುದೇ ಕಂಪನಗಳಿಗೆ ಅಲುಗಾಡದ ಹಾಗೆ ಪ್ರಭು ಶ್ರೀ ರಾಮನ ಮಂದಿರ ನಿರ್ಮಾಣವಾಗಲಿ ಎಂಬ ಹಾರೈಕೆಯೊಂದಿಗೆ ಸೀತಾರಾಮ್ ಅವರಿಗೆ ಶುಭಾಶಯಗಳು ಎಂದು ಅವರು ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version