ರಾಜಕೀಯ

ರಾಮನಗರ, ಚನ್ನಪಟ್ಟಣ ಅವಳಿ ನಗರಗಳಾಗಿ ಘೋಷಿಸಲಾಗುವುದು | ಎಚ್.ಡಿ.ಕೆ

Published

on

ಸುದ್ದಿದಿನ, ಚನ್ನಪಟ್ಟಣ | ನ್ನಪಟ್ಟಣ ಹಾಗೂ ರಾಮನಗರವನ್ನು ಅವಳಿನಗರವನ್ನಾಗಿ ಘೋಷಣೆಮಾಡುದರ ಮೂಲಕ ಎರಡೂ ನಗರಗಳಿಗೆ ದಿನದ ಇಪತ್ನಾಲ್ಕು ಗಂಟೆಯೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೆಡಿಎಸ್ ನ ಅವಳಿ ಕೋಟೆಯ ಬಗೆಗಿನ ತಮ್ಮ ಪ್ರೀತಿಯನ್ನು ಸಾಕ್ಷಾತ್ಕರಿಸಿದರು.

ಪತ್ನಿ ಅನಿತಾ ಅವರೊಂದಿಗೆ ಚನ್ನಪಟ್ಟಣದಲ್ಲಿ ಇಂದು ನಗರೋತ್ಥಾನ ಯೋಜನೆಯ ಮೂವತ್ತು ಕೋಟಿ ಮೌಲ್ಯದ ಕಾಮಗಾರಿಗಳಿಗೆ ಶಿಲಾನ್ಯಾಸ ನೆರೆವೇರಿಸಿ ಮಾನಾಡಿದ ಅವರು, ರೈತರಿಗಾಗಿ ರಾಮನಗರ ಮತ್ತು ಚನ್ನಪಟ್ಟಣ ಹೆದ್ದಾರಿಯ ಮಧ್ಯ ವಿರುವ 500 ಎಕರೆ ಪ್ರದೇಶದಲ್ಲಿ ರೇಷ್ಮೆ ಸೂಪರ್ ಮಾರುಕಟ್ಟೆ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು.

ರಾಮನಗರ ಹಾಗೂ ಚನ್ನಪಟ್ಟಣ ನನ್ನ ಎರಡು ಕಣ್ಣುಗಳು. ನನ್ನ ಈ ಎರಡೂ ಕ್ಷೇತ್ರಗಳ‌ ಅಭಿವೃದ್ಧಿಗೆ ಎರಡು ಸಾವಿರ ಕೋಟಿ ರೂಗಳನ್ನು ಈ ವರ್ಷ ಖರ್ಚುಮಾಡುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮದ ನಂತರ ಪತ್ನಿ ಅನಿತಾ ಅವರೊಂದಿಗೆ ದೇವರಹೊಸಳ್ಳಿ ಗ್ರಾಮದಲ್ಲಿರುವ ಸಜೀವರಾಯ ಸ್ವಾಮಿ ದೇವಸ್ಥಾನಕ್ಕೆ ತೆರಳಿದ ಅವರು ಪೂಜೆ ಸಲ್ಲಿಸಿ, ಗ್ರಾಮಸ್ಥರ ಬೇಡಿಯಂತೆ ಸಮುದಾಯ ಭವನವನ್ನು ಕಟ್ಟಿಸಿಕೊಡಲಾಗುವುದೆಂದು ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version