ಸಿನಿ ಸುದ್ದಿ
ನಟಿ ರಂಬಾ ಅವರ ಸೀಮಂತ ಕಾರ್ಯದ ಚಿತ್ರಗಳು ವೈರಲ್ !
ನವದೆಹಲಿ (ಪಿಟಿಐ): ನಟಿ ರಂಬಾ ತಮ್ಮ ಸೀಮಂತ ಕಾರ್ಯದ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಅವು ವೈರಲ್ ಆಗಿವೆ.
ನಟಿ ರಂಬಾ ತಮ್ಮ ಸಂಬಂಧಿಕರ ಜತೆ ನೃತ್ಯ ಮಾಡುತ್ತಿರುವ ಫೋಟೋ ಇನ್ಟ್ರಾಗ್ರಾಮ್ ನಲ್ಲಿ ಹೆಚ್ಚು ಸುದ್ದು ಮಾಡುತ್ತಿದೆ. ನಟಿ ರಂಬಾ ಅವರು ತಮ್ಮ ಪತಿ ಇಂದ್ರಕುಮಾರ್ ಪಥನಾಥನ್ , ಹೆಣ್ಣುಮಕ್ಕಳಾದ ಲಯಾನ್ಯಾ ಮತ್ತು ಸಶಾ ಸಂತೋಷದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಚಿತ್ರಗಳು ಅಭಿಮಾನಿಗಳನ್ನು ಆಕರ್ಷಿಸುತ್ತಿವೆ.
ಟೊರೊಂಟೊದಲ್ಲಿ ತನ್ನ ಕುಟುಂಬದೊಂದಿಗೆ ನೆಲೆಸಿರುವ ರಂಭ, ಚಿನ್ನದ ಆಭರಣಗಳಿಂದ ಅಲಂಕರಿಸಲ್ಪಟ್ಟ ಸೀರೆಯಲ್ಲಿ ಕಂಗೊಳಿಸುತ್ತಿದ್ದಾರೆ. ಜತಗೆ ಅವರ ನಗು ಕೂಡ ಆಭರಣಕ್ಕಿಂತ ಆಕರ್ಷಕವಾಗಿದೆ ಎಂದು ಅಭಿಮಾನಿಗಳು ಸಂತಸ ಹಂಚಿಕೊಂಡಿದ್ದಾರೆ.