ದಿನದ ಸುದ್ದಿ

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ : ಯುವತಿ ಬಂಧನ..!

Published

on

ಸುದ್ದಿದಿನ, ಬೆಂಗಳೂರು : ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಂತಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿಯಿಂದ ಭರ್ಜರಿ ಭೇಟೆ ದೊರೆತಿದೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆಯನ್ನು ಸರ್ಕಾರ ಸೌಮೇಂದ್ರ ಮುಖರ್ಜಿ ಅವರ ನೇತೃತ್ವದ ಎಸ್ಐಟಿ ತಂಡಕ್ಕೆ ವಹಿಸಿತ್ತು.

ಇದನ್ನೂ ಓದಿ | 1 ರಿಂದ 9ನೇ ತರಗತಿಯವರೆಗೆ ಎಲ್ಲಾ ಮಕ್ಕಳು ಪರೀಕ್ಷೆ ಇಲ್ಲದೇ ಪಾಸ್..! 

ಇಂದಿನಿಂದ ತನಿಖೆ ಆರಂಭಿಸಿರುವ ಎಸ್ಐಟಿಯ ಅಧಿಕಾರಿಗಳು, ಮೊದಲ ದಿನವೇ ದೂರುದಾರ ದಿನೇಶ್ ಕಲ್ಲಹಳ್ಳಿಗೆ ಸೆಕ್ಸ್ ಸಿಡಿ ನೀಡಿದಂತಹ ಯಶವಂತಪುರದ ಓರ್ವ ವ್ಯಕ್ತಿ ಸೇರಿದಂತೆ ಒಟ್ಟು ನಾಲ್ವರನ್ನು ವಶಕ್ಕೆ ಪಡೆದು, ತೀವ್ರ ವಿಚಾರಣೆ ನಡೆಸುತ್ತಿದೆ. ವಶಕ್ಕೆ ಪಡೆದವರಲ್ಲಿ ಓರ್ವ ಯುವತಿಯೂ ಸೇರಿದ್ದು, ‘ಸಿಡಿ’ ಮೂಲದ ಕುರಿತಂತೆ ಎಸ್ಐಟಿ ತನಿಖೆ ಮುಂದಿನ ಬೆಳವಣಿಗೆಗೆ ಈಗ ಕುತೂಹಲ ಮೂಡಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version